Site icon Suddi Belthangady

ಉಜಿರೆ ಎಸ್.ಡಿ.ಎಂ ಕಾಲೇಜು ಮತ್ತು ಎಸ್.ಡಿ.ಎಂ ಕ್ರೀಡಾ ವಿಭಾಗದಿಂದ ಬೇಸಿಗೆ ಶಿಬಿರ

ಉಜಿರೆ: ಎಸ್. ಡಿ. ಎಂ ಕಾಲೇಜು ಮತ್ತು ಎಸ್. ಡಿ. ಎಂ ಕ್ರೀಡಾ ವಿಭಾಗ ಇದರ ಸಂಯೋಜನೆಯಲ್ಲಿ ಬೇಸಿಗೆ ಈಜು, ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ತರಬೇತಿ ಶಿಬಿರವು ಎ.10ರಂದು ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ್ ಪಿ. ಅವರು ಮಾತನಾಡಿ ಬೇಸಿಗೆ ಈಜು ತರಬೇತಿಯನ್ನು ಸರಿಯಾಗಿ ಉಪಯೋಗ ಪಡೆದು ಆಗುವ ಅವಘಡವನ್ನು ತಪ್ಪಿಸಲು ನಮನ್ನು ನಾವು ಸಾಧೃಢರಾಗಬೇಕು ಎಂದರು.

ಹಾಗೂ ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಕ್ರೀಡಾ ಕಾರ್ಯದರ್ಶಿ ರಮೇಶ್ ಹೆಚ್. ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಎಲ್ಲಾ ವ್ಯವಸ್ಥೆಯನ್ನು ನೀಡುವ ಉದ್ದೇಶದಿಂದ ನಾವು ಈ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದೇವೆ ಇದನ್ನು ಸರಿಯಾಗಿ ಉಪಯೋಗ ಪಡೆದುಕೊಳ್ಳಿ ಎಂದರು.

ಎಸ್. ಡಿ. ಎಂ ಕ್ರೀಡಾ ಶಿಕ್ಷಕರು ಮತ್ತು ಪೋಷಕರು ಹಾಗೂ ಕ್ರೀಡಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಎಸ್.ಡಿ. ಎಂ ರೆಸಿಡೆನ್ಸಿ ಕಾಲೇಜಿನ ಶಿಕ್ಷಕ ಪವಿತ್ರ ಕುಮಾರ್ ನೆರವೇರಿಸಿದರು.

Exit mobile version