ಬೆಳಾಲು: ಗ್ರಾಮದ ಮಾಯ ನೆಕ್ಕಿಲಾಡಿ ನಿವಾಸಿ ಕೊರಗಪ್ಪ(43) ಎ. 11ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎ. 10ರಂದು ರಾತ್ರಿ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮಕ್ಕೆಂದು ಪತ್ನಿ ಮತ್ತು ಮಕ್ಕಳು ಮಾತ್ರ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ಬೆಳಗ್ಗೆ ಸಂಬಂಧಿಕರ ಮನೆಯಿಂದ ಕೆಲಸಕ್ಕೆ ತೆರಳಿದ್ದು ಮಕ್ಕಳು ಮನೆಗೆ ಬಂದು ತಂದೆ ಕಾಣದಿರುವುದು ಕಂಡು ಹುಡುಕಾಟವನ್ನು ನಡೆಸಿದ್ದಾರೆ. ಮೃತ ದೇಹವು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮನೆಯ ಸ್ಥಾನದ ಕೊಠಡಿಯಲ್ಲಿ ಕಂಡು ಬಂದಿದೆ. ತಕ್ಷಣ ಸಂಬಂಧಿಕರಿಗೂ ತಿಳಿಸಿದ್ದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ ಸಾವಿತ್ರಿ ಹಾಗೂ ಮಕ್ಕಳಾದ ಶಿವಕುಮಾರ್, ದೀಕ್ಷಿತ್, ಅಂಕಿತ ಇವರನ್ನು ಅಗಲಿದ್ದಾರೆ.