Site icon Suddi Belthangady

ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯಲ್ಲಿ ಬೇಸಿಗೆ ಶಿಬಿರ

ಮುಂಡಾಜೆ: ಸಂಸ್ಥೆಯಲ್ಲಿ ಏ. 7ರಿಂದ 8ರವರೆಗೆ ಬೇಸಿಗೆ ಶಿಬಿರವು ನಡೆಯಿತು. ಏ. 7ರಂದು ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ ಶ್ರೀಮಾನ್ ಇವರ ಉದ್ಘಾಟನೆಯೊಂದಿಗೆ ಶಿಬಿರವು ಚಾಲನೆ ಗೊಂಡಿತು.

ಎರಡು ದಿನಗಳ ಕಾಲ ನಡೆದ ಶಿಬಿರದಲ್ಲಿ 106 ವಿದ್ಯಾರ್ಥಿಗಳು ಹಾಗು 6 ಜನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಎಸ್.ಡಿ.ಎಮ್ ನ್ಯಾಚುರಪತಿ ವಿದ್ಯಾರ್ಥಿನಿಯರು ಐಶ್ವರ್ಯ ಹಾಗೂ ಪ್ರಾಚ್ಚ್ಯ ಕೀರ್ತಿಯವರು ಯೋಗ ತರಬೇತಿ ನೀಡಿದರು.

ವಸಂತಿ ಹಾಗೂ ಚೇತನರವರು ಕ್ರಾಫ್ಟ್ ಹೇಳಿಕೊಟ್ಟರು. ಯೋಗೀಶ್ ಹಾಗೂ ವಿಜಯ್ ರವರು ದೇಶೀ ಆಟಗಳನ್ನು ಹೇಳಿಕೊಟ್ಟರು. ಏ. 8ರಂದು 3.00ಗಂಟೆಗೆ ಕಾರ್ಯಕ್ರಮ ಸಮಾರೋಪಗೊಂಡಿತು. ಎಲ್ಲಾ ಶಿಕ್ಷಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.

Exit mobile version