Site icon Suddi Belthangady

ಮುಳಿಕ್ಕಾರು ಗ್ರಾಮದೈವ ವ್ಯಾಘ್ರ ಚಾಮುಂಡಿ, ಪರಿವಾರ ದೈವಗಳ ನೇಮೋತ್ಸವ

ಧರ್ಮಸ್ಥಳ: ಗ್ರಾಮದ ಮುಳಿಕ್ಕಾರು ಬೈಲಿನ ಶ್ರೀ ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತ್ತು. ಏ.10ರಂದು ಬೆಳಿಗ್ಗೆ ಮುಳಿಕ್ಕಾರು ನಿಡ್ಲೆ ಮದ್ಯೆ ಮಾಡಾಂಗಳ್ ಎಂಬಲ್ಲಿ ಹರಿಯುತ್ತಿರುವ ಸಂಪಿಗೆ ನದಿ ಮದ್ಯದಲ್ಲಿರುವ ಬೆರ್ಮೆರ್ ( ನಾಗ ಬ್ರಹ್ಮ) ಸಾನಿಧ್ಯದಲ್ಲಿ ನಾಗ ಬ್ರಹ್ಮದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಕಲ್ಲಾಜೆ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಂಪಿಗೆ ನದಿ ತಟದಲ್ಲಿ ವನ ಭೋಜನ ನಡೆಯಿತು. ರಾತ್ರಿ 9 ಗಂಟೆಗೆ ಕಲ್ಲಾಜೆ ಶ್ರೀ ಪಿಲಿ ಚಾಮುಂಡಿ ದೈವಸ್ಥಾನದಿಂದ ದೈವಗಳ ವೈಭವದ ಭಂಡಾರ ಹೊರಟು ಕಾಡಿನ ಮದ್ಯೆ ಇರುವ ನೆಲ್ಲಿಕಟ್ಟೆ ಎಂಬಲ್ಲಿ ನೇಮೋತ್ಸವ ಜರಗಿತು. ಗ್ರಾಮದ ಗುತ್ತಿನರಾರಾರು ಸೇರಿದಂತೆ ದೈವಸ್ಥಾನ ಸಮಿತಿ ಸರ್ವ ಸದಸ್ಯರು, ಊರ ಪ್ರಮುಖರು ಹಾಗೂ ಊರ, ಪರವೂರ ಭಕ್ತ ಭಾಂದವರು ಉಪಸ್ಥಿತರಿದ್ದರು.

Exit mobile version