Site icon Suddi Belthangady

ಮನ್ ಶರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗೆ ನೂತನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಝೀನತ್ ಬಾನು

ಬೆಳ್ತಂಗಡಿ: ಗೇರುಕಟ್ಟೆ ಸೈಯದ್ ಉಮರ್ ಅಸ್ಸಖಾಫ್ ತಂಗಳ್ ರವರ ನೇತೃತ್ವದ ಮನ್ ಶರ್ ಅಕಾಡೆಮಿಯ ಇಂಗ್ಲೀಷ್ ಮೀಡಿಯಂ ಸ್ಕೂಲಿನ ನೂತನ ಪ್ರಾಂಶುಪಾಲರಾಗಿ ಝೀನತ್ ಬಾನು (MA, BEd, DPPEd) ರವರು ಏ. 9ರಂದು ಅಧಿಕಾರ ಸ್ವೀಕರಿಸಿದರು.

ಸಂಸ್ಥೆಯ ಜನರಲ್ ಮ್ಯಾನೇಜರ್ ಮನ್ ಶರ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಹೈದರ್ ಮರ್ದಳರವರು ನೇಮಕಾತಿ ಪತ್ರವನ್ನು ನೀಡುವುದರ ಮೂಲಕ ಕರ್ತವ್ಯಕ್ಕೆ ಹಾಜರಾದರು. ಸಂಸ್ಥೆಯ ಆಡಳಿತಾಧಿಕಾರಿ ರಶೀದ್ ಕುಪ್ಪೆಟ್ಟಿ, ಅರೇಬಿಕ್ ವಿಭಾಗದ ಮುಖ್ಯಸ್ಥರು ಬಹುಮಾನ್ಯ ಅಬ್ದುಲ್ ಸಖಾಫಿ ನಿಂತಿಕಲ್ಲು, ಪ್ಯಾರಾ ಮೆಡಿಕಲ್ ಉಪ ಪ್ರಾಂಶುಪಾಲ ಗೌತಮಿ ಶರಣ್, ಪಿ.ಯು.ಸಿ ವಿಭಾಗದ ಹಿರಿಯ ಉಪನ್ಯಾಸಕಿ ಹಂಸಶ್ರೀ, ಎಸ್.ಎಸ್.ಎಲ್.ಸಿ ವಿಭಾಗದ ಮುಖ್ಯಸ್ಥರು ಸುಹೈಬಾ ಜಾರಿಗೆ ಬೈಲು, ಶಿಕ್ಷಕಿ ಸಫ್ ನಾಝ್ ಉಪಸ್ಥಿತರಿದ್ದು ಶುಭ ಹಾರೈಸಿದರು.

Exit mobile version