Site icon Suddi Belthangady

ಕನ್ಯಾಡಿ 2 ಸ. ಉ. ಹಿ. ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ

ಕನ್ಯಾಡಿ: ಸ. ಉ. ಹಿ. ಪ್ರಾ. ಶಾಲೆಯಲ್ಲಿ ಏ. 1ರಿಂದ 3 ರವರೆಗೆ ಮೂರು ದಿನಗಳ ಕಾಲ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು ಅದರ ಸಮಾರೋಪ ಕಾರ್ಯಕ್ರಮವು ಏ. 3ರಂದು ನಡೆಯಿತು.

ಈ ಮೂರು ದಿನದ ಕಾರ್ಯಾಗಾರದಲ್ಲಿ ಲಘು ಸಂಗೀತ, ಧ್ಯಾನ, ಕಥೆಗಳು ಮತ್ತು ಆಟಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಹಾರ್ಟ್ ಫುಲ್ ನೆಸ್ ಧ್ಯಾನ ಕೇಂದ್ರ ಕನ್ಯಾಡಿ 2 ಇಲ್ಲಿನ ವತ್ಸಲಾ, ಸಾವಿತ್ರಿ, ವೀಣಾ, ಸುಮತಿ, ಸಂಗೀತ ಶಿಕ್ಷಕ ಕಮಲಾಕ್ಷ ಗುಡಿಗಾರ ಇವರೆಲ್ಲರಿಂದ ಮಕ್ಕಳು ಹೆಚ್ಚು ವಿಷಯಗಳನ್ನು ಕಲಿತರು ಮತ್ತು ಅದರ ಪ್ರಯೋಜನವನ್ನು ಪಡೆದುಕೊಂಡರು.

ಈ ಸಮಾರೋಪ ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಷ ಕೆ. ನಂದ, ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಎನ್., ಶಾಲಾ ಶಿಕ್ಷಕ ವೃಂದ, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಎನ್. ಸ್ವಾಗತಿಸಿದರು. ನಿರೂಪಣೆಯನ್ನು ಶಿಕ್ಷಕಿ ರಾಜಶ್ರೀ ನಡೆಸಿಕೊಟ್ಟರು. ಶಿಕ್ಷಕಿ ತೇಜಸ್ವಿ ಧನ್ಯವಾದವಿತ್ತರು.

Exit mobile version