Site icon Suddi Belthangady

ಏ. 10-14: ಶ್ರೀ ರಾಮ ಸೇವಾ ಮಂದಿರ ಕೊಕ್ಕಡದಲ್ಲಿ ಮಕ್ಕಳ ಬೇಸಿಗೆ ಶಿಬಿರ

ಕೊಕ್ಕಡ: ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ ಹಾಗೂ ಶ್ರೀರಾಮ ವಿದ್ಯಾಸಂಸ್ಥೆ, ಪಟ್ಟೂರು
ಇವುಗಳ ಸಹಯೋಗದಲ್ಲಿ ದಿನಾಂಕ ಏ.10ರಿಂದ 14ರವರೆಗೆ
ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ಶ್ರೀ ರಾಮ ಸೇವಾ ಮಂದಿರ ಕೊಕ್ಕಡದಲ್ಲಿ 5ರಿಂದ 9ನೇ ತರಗತಿ ಮಕ್ಕಳಿಗೆ
ಬೇಸಿಗೆ ಶಿಬಿರ ಆಯೋಜಿಸಲಾಗಿರುತ್ತದೆ.

ಈ ಶಿಬಿರದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಹಿಂದೂ ಸಂಸ್ಕೃತಿಯ ಯೋಗ, ಭಜನೆ, ಭಗವದ್ಗೀತೆ, ಪುರಾಣ ಪುಣ್ಯ ಕಥೆಗಳು, ಚಿತ್ರಕಲೆ, ದೇಶೀಯ ಆಟಗಳು ಮುಂತಾದ ವಿಷಯಗಳ ಕುರಿತಾಗಿ ಮಕ್ಕಳಿಗೆ ತರಬೇತಿ ಮತ್ತು ಸಂಸ್ಕಾರ ಭರಿತ ಶಿಕ್ಷಣ ನೀಡಲಾಗುವುದು.

ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸಬೇಕಾಗಿ ಆಯೋಜಕರು ತಿಳಿಸಿದ್ದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
1) ಧರ್ಣಪ್ಪ ಕೆಂಪಕೋಡಿ 9741398504
2) ಶಶಿ ಕೊಕ್ಕಡ 9900707418
3) ಚಂದ್ರಶೇಖರ ಶೇಟ್ 9743852163 ಕರೆ ಮಾಡಬಹುದಾಗಿ ತಿಳಿಸಿದ್ದಾರೆ

ವಿಶೇಷ ಸೂಚನೆ :- ಶಿಬಿರಾರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಶ್ರೀ ರಾಮ ವಿದ್ಯಾಸಂಸ್ಥೆ ಪಟ್ಟೂರು ಇಲ್ಲಿನ ಶಾಲಾ ವಾಹನ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ.

ಮಾರ್ಗ ಸಂಖ್ಯೆ 01: ಹೊಸಮಜಲು, ನೆಲ್ಯಾಡಿ, ಗೋಳಿತ್ತೊಟ್ಟು, ಕೊಕ್ಕಡ ಸಂಪರ್ಕಿಸಿ: 9901900453.

ಮಾರ್ಗ ಸಂಖ್ಯೆ 02 : ಸೂರ್ಯತ್ತಾವು, ಅನಾರು, ಪಟ್ರಮೆ, ಪಟ್ಟೂರು, ಕೊಕ್ಕಡ ಸಂಪರ್ಕಿಸಿ: 9036866955

Exit mobile version