ಕನ್ಯಾಡಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿಯ ಕುರಿತಾಗಿ ಅಜಿತ್ ಪೂಜಾರಿ ಕನ್ಯಾಡಿಯವರು ರಚಿಸಿರುವ ಬಂದೆನು ಶಾಲೆಗೆ ಓಡೋಡಿ ಹಾಡಿನ ಬಿಡುಗಡೆ ಕಾರ್ಯಕ್ರಮ ಕನ್ಯಾಡಿ ಶಾಲೆಯಲ್ಲಿ ನಡೆಯಿತು. ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಹಾಗೂ ನಿವೃತ ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಕಾರಂತ್ ಇವರು ಜೊತೆಗೂಡಿ ಬಿಡುಗಡೆಗೊಳಿಸಿದರು.
ಕಲಿತ ಶಾಲೆಗೆ ಒಬ್ಬ ಹಿರಿಯ ವಿದ್ಯಾರ್ಥಿಯಾಗಿ ಎಲ್ಲರಿಗೂ ಮಾದರಿಯಾಗುವಂತಹ ಕಾರ್ಯವನ್ನು ಅಜಿತ್ ಪೂಜಾರಿಯವರು ಮಾಡಿದ್ದಾರೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಸರ್ಕಾರಿ ಶಾಲೆಗಳ ಉನ್ನತಿಗಾಗಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳನ್ನು ಸೇರಿಸಿ ಇನ್ನೊಂದು ಹಾಡು ಮಾಡಬೇಕೆಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ ಶ್ರೀನಿವಾಸ್ ರಾವ್ ಮಾತನಾಡಿ ಶಾಲೆಯೊಂದಿಗೆ ಮಕ್ಕಳು ಹಾಗೂ ಪೋಷಕರನ್ನು ಭಾವನಾತ್ಮಕವಾಗಿ ಬೆಸೆಯುವಂತಹ ಅದ್ಭುತವಾದ ಶಕ್ತಿ ಈ ಹಾಡಿನಲ್ಲಿ ಇದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿಯವರು ಮಾತನಾಡಿ ಬಂದೆನು ಶಾಲೆಗೆ ಓಡೋಡಿ ಹಾಡು ಮುಂದಕ್ಕೆ ಬಂದೆನು ಸರಕಾರಿ ಶಾಲೆಗೆ ಓಡೋಡಿ ಎನ್ನುವ ರೀತಿಯಲ್ಲಿ ಈ ಹಾಡು ಕಾರಣೀಭೂತವಾಗುತ್ತದೆ ಹಾಗೂ ಒಬ್ಬ ಶಾಲೆಯ ಹಳೆ ವಿದ್ಯಾರ್ಥಿಯಾಗಿ ಅಜಿತ್ ಪೂಜಾರಿ ಕನ್ಯಾಡಿಯವರದ್ದು ನಿಜವಾಗಿಯೂ ಸ್ಫೂರ್ತಿ ಹಾಗೂ ಮಾದರಿಯ ಕೆಲಸ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ದೊಂಡೋಲೆ ಮನೆಯ ಪುರಂದರ ರಾವ್, ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಹರ್ ರಾವ್, ಸುದ್ದಿ ವಾಹಿನಿಯ ಪ್ರಮುಖರು ದಾಮೋದರ್ ದೊಂಡೋಲೆ, ನಿವೃತ್ತ ದೈಹಿಕ ಶಿಕ್ಷಕ ರಮೇಶ್ ಕಾರಂತ್, ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರು ಪ್ರೀತಮ್ ಡಿ. ಧರ್ಮಸ್ಥಳ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ನಂದ ಕೆ. ಹಾಗೂ ಶಾಲಾ ಮುಖ್ಯ ಶಿಕ್ಷಕರು ಪುಷ್ಪಾ ಎನ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಜಿತ್ ಅವರನ್ನು ಆಶೀರ್ವಾದ ಪೂರ್ವಕವಾಗಿ ಶಾಲೆಯ ವತಿಯಿಂದ ಗೌರವಿಸಲಾಯಿತು. ನಿರೂಪಣೆಯನ್ನು ಸುಬ್ರಾಯ ಅಕ್ಷಯ್ ನಗರ ಹಾಗು ಸುದರ್ಶನ ಕೆ. ವಿ. ಧನ್ಯವಾದ ನೀಡಿದರು.