Site icon Suddi Belthangady

ಬಳಂಜ ಶಾಲಾ ಶಿಕ್ಷಕಿ ಗ್ರೇಟ್ಟಾ ಮರಿಯ ಡಿ ಮೆಲ್ಲೋರಿಗೆ ಬೀಳ್ಕೊಡುಗೆ

ಬಳಂಜ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಳಂಜದಲ್ಲಿ ಸುಮಾರು 24 ವರ್ಷಗಳ ಕಾಲ ಸೇವೆ ಸಲ್ಲಿಸಿದ ಗ್ರೇಟ್ಟಾ ಮರಿಯ ಡಿ’ಮೆಲ್ಲೋ ರವರು ಸೇವಾ ನಿವೃತ್ತಿ ಹೊಂದಿದ್ದು, ಇವರಿಗೆ ಏ. 8ರಂದು ಬೀಳ್ಕೊಡುಗೆ ಕಾರ್ಯಕ್ರಮವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ ಬಳಂಜ ಶಾಲಾ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರು ಚಂದ್ರಶೇಖರ್ ಪಿ.ಕೆ., ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಮನೋಹರ್ ಕಾರ್ಯದರ್ಶಿ ರತ್ನರಾಜ್, ಟ್ರಸ್ಟಿಗಳಾದ ಬಿ. ಪ್ರಮೋದ್ ಕುಮಾರ್ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ವೈ ಬಳಂಜ, ಸೇವಾ ನಿವೃತ್ತಿ ಹೊಂದಿರುವ ರೆನಿಲ್ದಾ ಜೋಯ್ಸ್ ಹಾಗೂ ಕೊಕ್ಕಡ ಸಿ.ಆರ್.ಪಿ ಯವರಾದ ವಿಲ್ಫ್ರೆಡ್ ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸುಲೋಚನಾ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ ಸಿ.ಆರ್. ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.

ಗ್ರೇಟ್ಟಾ ಮರಿಯ ಡಿ’ ಮೆಲ್ಲೋ ರವರು ಶಾಲೆಗೆ ಸುಮಾರು 54000 ಮೊತ್ತದ ಪ್ರೊಜೆಕ್ಟರನ್ನು ಕೊಡುಗೆಯಾಗಿ ನೀಡಿಯುತ್ತಾರೆ. ಎಲ್ಲಾ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಕಾರ್ಯಕ್ರಮವನ್ನು ಚೇತನ ಎಸ್.ಡಿ.ಎಂ.ಸಿ ಸದಸ್ಯೆ ಸ್ವಾಗತಿಸಿ, ನಿರೂಪಿಸಿ, ಶಿಕ್ಷಕಿ ಕೀರ್ತಿ ವಂದಿಸಿದರು.

Exit mobile version