Site icon Suddi Belthangady

ಅಕ್ಷಯ ಕಾಲೇಜಿನಲ್ಲಿ ನಡೆದ ಫೆಸ್ಟ್: ಶ್ರೀ ಗುರುದೇವಾ ಪ್ರಥಮ ದರ್ಜೆ ಕಾಲೇಜಿಗೆ ಪ್ರಶಸ್ತಿ

ಬೆಳ್ತಂಗಡಿ: ಶ್ರೀ ಗುರುದೇವಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಕ್ಷಯ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಏ. 8ರಂದು ನಡೆದ ಈ ಸ್ಪರ್ಧೆಯಲ್ಲಿ ಫ್ಯಾಶನ್ ಶೋ ಚಂದನ ದ್ವಿತೀಯ ಬಿ. ಎ. ಪ್ರಥಮ ಬಹುಮಾನ, ಸೋಪ್ ಆರ್ಟ್ ಕೀರ್ತನ್ ತೃತೀಯ ಬಿ. ಕಾಂ. ತೃತೀಯ ಬಹುಮಾನ, ಜಾನಪದ ನೃತ್ಯ ಈಶ್ವರಿ, ಸಂಜನಾ, ಸೀತಾಲಕ್ಷ್ಮೀ, ರಾಧಿಕಾ, ಸುರಕ್ಷಾ, ನಿಷ್ಮ, ಮೌಲ್ಯ, ದೀಕ್ಷಾ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ, ಭೋಧಕೇತರ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ.

Exit mobile version