ಗೇರುಕಟ್ಟೆ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಶನೈಶ್ವರ ಪೂಜೆ, ಧಾರ್ಮಿಕ ಸಭೆ ಹಾಗೂ ಯಕ್ಷಗಾನ ಬಯಲಾಟ ಏ. 5ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಂಜೆ ಸಾಮೂಹಿಕ ಪ್ರಾರ್ಥನೆ, ಸಂಜೆ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ ನಡೆಯಿತು.
ಮುಂದಿನ ವರ್ಷ ನಡೆಯಲಿರುವ ಬ್ರಹ್ಮಕಲಶೋ ತ್ಸವ ಸಂದರ್ಭದಲ್ಲಿ ದೇವಿಗೆ ಸ್ವರ್ಣ ಕಿರೀಟ ಸಮರ್ಪಣೆಗಾಗಿ ಸ್ವರ್ಣ ಕಿರೀಟ ಸಹಾಯಧನ ಹುಂಡಿಯನ್ನು ಅರ್ಚಕರು ವೇ. ಮೂ. ರಾಘವೇಂದ್ರ ಅಸ್ರನ್ನ ಅನಾವರಣ ಗೊಳಿಸಿದರು. ದೇವಸ್ಥಾನ ದಲ್ಲಿ ಪ್ರತಿ ತಿಂಗಳು ಮೊದಲನೇ ಶನಿವಾರ ಪ್ರಾಥಕಾಲ ಅಶ್ವಥ ಪೂಜೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
ಬಳಿಕ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ನಾಳ ಇವರಿಂದ ಕಾಡಮಲ್ಲಿಗೆ ತುಳು ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ. ಹರೀಶ್ ಕುಮಾರ್, ಸದಸ್ಯರುಗಳಾದ ನೀನಾ ಕುಮಾರ್, ರೀತಾ ಪಿ., ರಾಘವ ಹೆಚ್., ಶರತ್ ಕುಮಾರ್, ಮೋಹಿನಿ, ಹರೀಶ್ ಕೆ., ಅಭಿವೃದ್ಧಿ ಸಮಿತಿ, ಭಜನಾ ಮಂಡಳಿ, ಮಾತೃ ಮಂಡಳಿ, ವಿವಿಧ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು, ಸದಸ್ಯರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಶನೈಶ್ವರ ಪೂಜೆ, ಯಕ್ಷಗಾನ ಬಯಲಾಟ, ಸ್ವರ್ಣ ಕಿರೀಟ ಹುಂಡಿ ಸಮರ್ಪಣೆ