Site icon Suddi Belthangady

ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವಾಣಿ ಪದವಿ ಪೂರ್ವ ಕಾಲೇಜಿಗೆ 98.16% ಫಲಿತಾಂಶ

ಬೆಳ್ತಂಗಡಿ: ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ವಿಜ್ಞಾನ ವಾಣಿಜ್ಯ ಮತ್ತು ಕಲೆ ಮೂರು ವಿಭಾಗಗಳನ್ನು ಹೊಂದಿ ಅಂಕಗಳ ಮಾನದಂಡವಿಲ್ಲದೆ ಪ್ರವೇಶ ನೀಡಿದ್ದರೂ 98.16% ಫಲಿತಾಂಶ ಪಡೆಯುವುದರ ಮೂಲಕ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿರುತ್ತಾರೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿಂಚನ 593 ಅಂಕದೊಂದಿಗೆ ರಾಜ್ಯಕ್ಕೆ 7ನೇ ಸ್ಥಾನ ಮತ್ತು 592 ಅಂಕದೊಂದಿಗೆ ದೀಕ್ಷಾ ರಾಜ್ಯಕ್ಕೆ 8ನೇ ಸ್ಥಾನವನ್ನು ಪಡೆದಿರುತ್ತಾರೆ. ಈ ಮೂಲಕ ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಮೊದಲ ಎರಡು ಸ್ಥಾನಗಳನ್ನು ಗಳಿಸಿರುತ್ತಾರೆ. ಹಾಗೂ ರಿತೀಶಾ 587, ಕಿಶೋರ್ 587 ಅಂಕ. ವಿಜ್ಞಾನ ವಿಭಾಗದಲ್ಲಿ ವಿಭಾ ಕೆ.ಆರ್. 585 ಅಂಕಗಳನ್ನು ಗಳಿಸುವುದರ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಗಣ್ಯಶ್ರೀ 580 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಹಾಗೂ ಮೊಹಮ್ಮದ್ ಮುರ್ಷಿದ್ 579 ಅಂಕ. ಕಲಾ ವಿಭಾಗದಲ್ಲಿ ಶುಭ 569 ಅಂಕದೊಂದಿಗೆ ಪ್ರಥಮ ಮತ್ತು ಶ್ರವಣ 539 ಅಂಕದೊಂದಿಗೆ ದ್ವಿತೀಯ ಸ್ಥಾನ, ಅನನ್ಯ 532 ಅಂಕ ಗಳಿಸಿರುತ್ತಾರೆ.

ಒಟ್ಟಾರೆಯಾಗಿ ಪರೀಕ್ಷೆಗೆ ಹಾಜರಾದ 597 ವಿದ್ಯಾರ್ಥಿಗಳಲ್ಲಿ 586 ವಿದ್ಯಾರ್ಥಿಗಳು ಉತ್ತೀರ್ಣರಾಗಿ 98.16% ಫಲಿತಾಂಶವನ್ನು ವಿದ್ಯಾರ್ಥಿಗಳು ಪಡೆದಿರುತ್ತಾರೆ. 149 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 396ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 41 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕಲಾವಿಭಾಗ 100%, ವಿಜ್ಞಾನ ವಿಭಾಗ 97.93% ಮತ್ತು ವಾಣಿಜ್ಯ ವಿಭಾಗದಲ್ಲಿ 98.07% ಫಲಿತಾಂಶ ಬಂದಿರುತ್ತದೆ.

Exit mobile version