Site icon Suddi Belthangady

ಧರ್ಮಸ್ಥಳ ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಗೀತ ಹಾಗೂ ನೃತ್ಯ ವಾರ್ಷಿಕೋತ್ಸವ

ಧರ್ಮಸ್ಥಳ: ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಗೀತ ಹಾಗೂ ನೃತ್ಯ ವಾರ್ಷಿಕೋತ್ಸವ ಎ. 8ರಂದು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭವ್ಯ ಹೆಗ್ಡೆಯವರು ಅತಿಥಿಗಳಾಗಿ ಆಗಮಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿ ಮಕ್ಕಳಿಗೆ ಹಿತವಚನವನ್ನು ನೀಡಿದರು.

ವೇದಿಕೆಯಲ್ಲಿ ವಿದುಷಿ, ಮನೋರಮ ತೋಳ್ಪಡಿತ್ತಾಯ (ಸಂಗೀತ ತರಬೇತಿದಾರರು) ವಿದುಷಿ. ವಿದ್ಯಾ ಟೋಸರೆ, ಶಾಲಾ ಮುಖ್ಯ ಶಿಕ್ಷಕಿ ಪರಿಮಳ ಎಂ. ವಿ., ನೃತ್ಯ ಹಾಗೂ ಸಂಗೀತ ನೇತ್ರತ್ವದ ಶಿಕ್ಷಕಿ ಅಮೃತ ವಿ. ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತವನ್ನು 4ನೇ ತರಗತಿಯ ಪೂರ್ಣಶ್ರೀ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಆರಾಧ್ಯ. ಪಿ .ಜೋಶಿ ಹಾಗೂ ಹಾಗೂ ವೈಭವಿ ನಿರೂಪಿಸಿದರು. ಮಕ್ಕಳ ಪೋಷಕರು ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. 5ನೇ ತರಗತಿಯ ಮಾನ್ಯ ಧನ್ಯವಾದವಿತ್ತರು.

Exit mobile version