ಬೆಳ್ತಂಗಡಿ: ಸಂತೆಕಟ್ಟೆ ಬಳಿ ಅಡಿಕೆ ಅಂಗಡಿಯ ಶಟರ್ ಮುರಿದು ಕಳ್ಳರು ಒಳಗೆ ನುಗ್ಗಿದ ಘಟನೆ ಎ.7ರಂದು ಮಧ್ಯರಾತ್ರಿ ಸಮಯ ನಡೆದಿದೆ. ಬೆಳ್ತಂಗಡಿಯ ಸಂತೆಕಟ್ಟೆ ಬಳಿಯ ಸುಮುಖ ಟ್ರೇಡರ್ಸ್ ಸಂತೋಷ್ ಶೆಟ್ಟಿಯವರ ಅಡಿಕೆ ಅಂಗಡಿಗೆ ಮಧ್ಯರಾತ್ರಿ ಅಂಗಡಿಯ ಒಂದು ಬದಿಯ ಶಟರ್ ಮುರಿದು ಒಳ ಹೊಕ್ಕ ಕಳ್ಳರು ಅಂಗಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ.
ಸಂತೆಕಟ್ಟೆ ಬಳಿ ಅಡಿಕೆ ಅಂಗಡಿಗೆ ನುಗ್ಗಿದ ಕಳ್ಳರು
