Site icon Suddi Belthangady

ಜೈನ ಜಾತಿಗೆ ಮತ್ತು ಧರ್ಮಕ್ಕೆ ಅಪಮಾನ ಆರೋಪ: ರಾಜು ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಜೈನ ಬಾಂಧವರಿಂದ ದೂರು

ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸಂಭಾಷಣೆಯ ತುಣುಕುಗಳಲ್ಲಿ ಜೈನ ಜಾತಿ ಹಾಗೂ ಜೈನ ಧರ್ಮದವರನ್ನು ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ಮಾಡಿರುವ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ರಾಜು ಶೆಟ್ಟಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎ.7ರಂದು ಜೈನ ಬಾಂಧವರು ಬೆಳ್ತಂಗಡಿ
ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ್ ಅವರು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ದೂರುದಾರ ಅಜಯ್ ಕುಮಾರ್ ಪಿ.ಕೆ, ವಕೀಲ ಶಶಿಕಿರಣ್ ಜೈನ್, ಪುಷ್ಪರಾಜ್ ಜೈನ್ ಮಡಂತ್ಯಾರು, ಶೀತಲ್ ಜೈನ್, ಸುಕೇಶ್ ಜೈನ್ ಕಡಂಬು, ಸುನೀಶ್ ಜೈನ್ ಕಡಂಬು, ಆರಿಹಂತ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Exit mobile version