Site icon Suddi Belthangady

ಬಡ ಕುಟುಂಬಗಳ ಕಷ್ಟಕ್ಕೆ ಮಿಡಿದ ಎಸ್. ವೈ.ಎಸ್., ಎಸ್.ಎಸ್.ಎಫ್ ಹಾಗೂ ಜಮಾಅತರಿಂದ ಸಹಾಯಧನ

ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಎರಡು ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ವಿವಾಹ ನಿಶ್ಚಯವಾಗಿದ್ದು, ಈ ಮದುವೆಯನ್ನು ಇವರಿಗೆ ನೆರವೇರಿಸಲು ಕಷ್ಟಸಾದ್ಯವಾದದ್ದನ್ನು ಮನಗಂಡು ಪರಪ್ಪು ಜಮಾಅತ್ ನ ಆಡಳಿತ ಸಮಿತಿ, ಅಬುಧಾಬಿಯಲ್ಲಿ ಉದ್ಯೋಗದಲ್ಲಿರುವ ಗೇರುಕಟ್ಟೆಯ ಪಿ.ಎಸ್.ಮಹಮ್ಮದ್ ಮದನಿಯವರ ಮಗ ಸಲೀಕ್ ಎಂಬವರ ಮುತುವರ್ಜಿಯಿಂದ ಕೆ.ಸಿ.ಎಫ್ ಅಬೂಹದ್ರಿಯಾ ಘಟಕ, ಪರಪ್ಪು ಕೆ.ಎಮ್.ಜೆ, ಎಸ್.ವೈ.ಎಸ್., ಸ್ವಲಾತ್ ಸಮಿತಿ, ಎಸ್ ಎಸ್.ಎಫ್ ಹಾಗೂ ಜಮಾಅತರು ಸೇರಿಕೊಂಡು ಕ್ರೂಢಿಕರಿಸಿದ ನಗದನ್ನು ಎರಡು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಖತೀಬ ಎಫ್.ಹೆಚ್. ಮಹಮ್ಮದ್ ಮಿಸ್ಬಾಹಿ, ಕೆ.ಎಮ್.ಜೆ ಅಧ್ಯಕ್ಷ ಉಸ್ಮಾನ್ ಹಾಜಿ, ಎಸ್.ವೈ.ಎಸ್ ಅಧ್ಯಕ್ಷ ಸೈಫುಲ್ಲಾ, ಪಿ.ಎಸ್. ಮದನಿ, ಅಬ್ದುಲ್ ಖಾದರ್ ಹಾಜಿ, ಅಬೂಬಕ್ಕರ್ ಮರ್ಜೂಕಿ, ಮುಸ್ತಫ ಹಿಮ ಮಿ, ಎಸ್.ಎ.ಹಮೀದ್, ಇಹ್ ತಿಶಾಮ್ ಜಿ.ಹೆಚ್, ರಹಿಮಾನ್ ಮಾಸ್ಟರ್, ಉಮ್ಮರ್ ಜಿ. ಎ., ಸಿದ್ದೀಕ್ ಜಿ.ಹೆಚ್., ನೌಷಾದ್, ಹಮೀದ್ ಜಿ.ಡಿ., ಇರ್ಫಾನ್ ಎಸ್., ಬಶೀರ್ ಎಸ್.ಎಮ್.ಎಸ್., ಸವಾದ್ ಮುಂತಾದವರು ಹಾಜರಿದ್ದರು.

Exit mobile version