Site icon Suddi Belthangady

ನಡ್ವಾಲ್ ಸಿರಿ ಜಾತ್ರೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಗುರಿಪಳ್ಳ ಒಕ್ಕೂಟದ ವತಿಯಿಂದ ಶ್ರಮದಾನ ಕಾರ್ಯ

ಗುರಿಪಳ್ಳ: ಏ.10ರಿಂದ 14ರವರೆಗೆ ಇತಿಹಾಸ ಪ್ರಸಿದ್ಧ ಸಿರಿಗಳ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ಇಲ್ಲಿ ನಡೆಯುವ ವಾರ್ಷಿಕ ನಡ್ವಾಲ್ ಸಿರಿಜಾತ್ರ ಮಹೋತ್ಸವದ ಪೂರ್ವಭಾವಿಯಾಗಿ ಏ. 6ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರಿಪಳ್ಳ ಒಕ್ಕೂಟದ ವತಿಯಿಂದ ಶ್ರಮದಾನ ಕಾರ್ಯವನ್ನು ನಡೆಸಲಾಯಿತು.

ಒಕ್ಕೂಟದ ಅಧ್ಯಕ್ಷರು ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಸೇವಾಪ್ರತಿನಿಧಿ ಪುಷ್ಪಾವತಿ ಹಾಗೂ ಒಕ್ಕೂಟದ ಸದಸ್ಯರು ಹಾಜರಿದ್ದರು.

Exit mobile version