Site icon Suddi Belthangady

ಮೇಲಂತಬೆಟ್ಟು ನಲ್ಕೆತ್ಯಾರು ಬ್ರಹ್ಮ ಬೈದರ್ಕಳ ಊರ ಗರೋಡಿ ಶಿಲಾನ್ಯಾಸ

ಬೆಳ್ತಂಗಡಿ: ಕೊಡಮಣಿತ್ತಾಯ ದೈವಸ್ಥಾನ-ಶ್ರೀ ವನದುರ್ಗೆ ದೇವಸ್ಥಾನ ಮೇಲಂತಬೆಟ್ಟು ಇಲ್ಲಿನ ನಲ್ಕೆತ್ಯಾರು ಬ್ರಹ್ಮಬೈದರ್ಕಳ ಊರ ಗರೋಡಿ ಸ್ಥಳದಲ್ಲಿ ಎ. 6ರಂದು ಸಂಕ್ರಾಂತಿ ದರ್ಶನ-ಗರೋಡಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕರ್ನಾಟಕ ಸರ್ಕಾರದ ಮಾಜಿ ಸಚಿವ ಕೆ. ಗಂಗಾಧರ ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಾಲನ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಹಿರಿಯ ವಾಹನ ನಿರೀಕ್ಷಕ ಕೆ.ಚರಣ್ ಕುಮಾರ್, ಬಿನುತಾ ವಸಂತ ಬಂಗೇರ, ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಮುಂತಾದ ಗಣ್ಯರು ಭಾಗವಹಿಸಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶೈಲೇಶ್ ಕುಮಾರ್, ಮಾರಿ ಪೂಜಾ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಮಾಪಲಾಡಿ ಅತಿಥಿಗಳನ್ನು ಸ್ವಾಗತಿಸಿದರು.

Exit mobile version