ಉಜಿರೆ: ಬೆಳಾಲಿನಿಂದ ಉಜಿರೆಗೆ ಹೋಗುತ್ತಿದ್ದ ಶಿಫ್ಟ್ ಕಾರು ನಿನ್ನಿಕಲ್ಲು ಬಳಿ ರಸ್ತೆ ದಾಟುತ್ತಿದ್ದ ಮಕ್ಕಳಿಗೆ ಎ. 6ರಂದು ಡಿಕ್ಕಿ ಹೊಡೆದ ಪರಿಣಾಮ ಮಕ್ಕಳಿಗೆ ಗಾಯಗಳಾಗಿದ್ದು ತಕ್ಷಣ ವಾಹನ ಚಾಲಕ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶಿಫ್ಟ್ ಗಾಡಿ ಧರ್ಮಸ್ಥಳ ಕನ್ಯಾಡಿ ಸಮೀಪದ ಗಾಡಿಯಾಗಿದ್ದು, ಮಕ್ಕಳು ಅಂಗಡಿಯಿಂದ ಮನೆಗೆ ತೆರಳುವ ವೇಳೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರು ಡಿಕ್ಕಿಯಾಗಿದೆ.
ಮಕ್ಕಳು ಪುಣ್ಯಶ್ರೀ ಹಾಗೂ ಕೃತಿಕಾ ಇವರು 10ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು. ಸಂಜೀವ ಪೂಜಾರಿಯ ಮಗಳು ಕೃತಿಕಾ ಮತ್ತು ದಿವಂಗತ ವಿಶ್ವನಾಥ ಪೂಜಾರಿಯವರ ಮಗಳು ಪುಣ್ಯಶ್ರೀ. ಮಕ್ಕಳನ್ನು ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.