Site icon Suddi Belthangady

ಮಡಂತ್ಯಾರು: ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಫಾತಿಮತ್ ಸನ ರಾಷ್ಟ್ರಮಟ್ಟದಲ್ಲಿ ಪ್ರಥಮ

ಬೆಳ್ತಂಗಡಿ: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ ನಡೆಸಿದ, 5ನೇ ತರಗತಿ ಪಬ್ಲಿಕ್
ಪರೀಕ್ಷೆಯಲ್ಲಿ ದ.ಕ ಈಸ್ಟ್ ಜಿಲ್ಲೆಯ, ಮಡಂತ್ಯಾರು ರೇಂಜ್
ವ್ಯಾಪ್ತಿಯ ನೂರುಲ್ ಹುದಾ ಮದ್ರಸ ಇಲ್ಲಿನ ವಿದ್ಯಾರ್ಥಿನಿ ಫಾತಿಮತ್ ಸನಾ 600ರಲ್ಲಿ 600 ಅಂಕ ಗಳಿಸಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಫಾತಿಮತ್ ಸನಾ ಅವರು ಮಡಂತ್ಯಾರು ಜಮಾಅತ್‌ಗೊಳಪಟ್ಟ ಅಶ್ರಫ್ ಮತ್ತು ಸಬೀನಾ ದಂಪತಿಯ ಪುತ್ರಿ. ವಿದ್ಯಾರ್ಥಿನಿಯ ಈ ಸಾಧನೆಗೆ ತರಗತಿ ಅಧ್ಯಾಪಕರು ಸಹಿತ ಇತರ ಅಧ್ಯಾಪಕರುಗಳು ತರಬೇತಿ ನೀಡಿದರೆ, ಆಡಳಿತ ಸಮಿತಿ, ಜಮಾಅತರು, ಕುಟುಂಬಸ್ಥರು ಪ್ರೋತ್ಸಾಹ ನೀಡಿದ್ದಾರೆ.

Exit mobile version