Site icon Suddi Belthangady

ಕಾಡಿ‌ನಲ್ಲಿ ಸಿಕ್ಕ ಮಗುವಿನ ತಂದೆ ತಾಯಿಯ ವಿವಾಹ-ಕುಟುಂಬಿಕರ ಸಮ್ಮುಖದಲ್ಲಿ ಕುತ್ರೊಟ್ಟುವಿನಲ್ಲಿ ಮದುವೆ

ಕುತ್ರೊಟ್ಟು: ಬೆಳಾಲಿನ ಮುಂಡ್ರೊಟ್ಟು ಮಾಯ ಕಾಡಿನಲ್ಲಿ ಸಿಕ್ಕ ಮಗುವಿನ ತಂದೆ- ತಾಯಿ ಎ. 2ರಂದು ಪತ್ತೆಯಾದ ಬೆನ್ನಲ್ಲೇ, ಎರಡು ಕುಟುಂಬದ ಒಪ್ಪಿಗೆಯ ಮೇರೆಗೆ ನಡ ಗ್ರಾಮದ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಎ. 6ರಂದು ಶುಭ ಮುಹೂರ್ತದಲ್ಲಿ ವಿವಾಹವಾಗಿದ್ದಾರೆ.

ದೇವಸ್ಥಾನದ ಅರ್ಚಕರ ಪೌರೋಹಿತ್ಯದಲ್ಲಿ ಮದುವೆ ನಡೆದಿದ್ದು, ಯುವಕ ಮತ್ತು ಯುವತಿಯ ಮನೆಯವರು ಹಾಜರಿದ್ದರು.

ಬೆಳಾಲು ಮಾಯದ ತಿಮ್ಮಪ್ಪ ಗೌಡರ ಪುತ್ರ ರಂಜಿತ್ ಮತ್ತು ಧರ್ಮಸ್ಥಳದ ಕೊಳಂಗಾಜೆ ಧರ್ಣಪ್ಪ ಗೌಡರ ಪುತ್ರಿ ಸುಶ್ಮಿತಾರವರು ವಿವಾಹವಾಗಿದ್ದು, ಮುಂದೆ ಕಾನೂನಾತ್ಮಕವಾಗಿ ಮಗುವನ್ನು ಪಡೆಯುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಈ ಮೂಲಕ ಬೆಳಾಲು ಕಾಡಿನಲ್ಲಿ ಸಿಕ್ಕ ಮಗುವಿನ ಪ್ರಕರಣ ಸುಖಾಂತ್ಯಗೊಂಡಂತಾಗಿದೆ. ಮಗು ಬಿಟ್ಟ ಪ್ರಕರಣದಲ್ಲಿ ಪೋಷಕರ ಮೇಲೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version