Site icon Suddi Belthangady

ಲಾಯಿಲ: ಅತಿದೊಡ್ಡ ಹೂವಿನ ರಂಗೋಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಶ್ರದ್ಧಾ ಶೆಟ್ಟಿಗೆ ಸ್ಥಾನ

ಬೆಳ್ತಂಗಡಿ: ಲಾಯಿಲಾ ಎಣಿಂಜೆಯ ಬಾಲಕಿ ಶ್ರದ್ಧಾ ಶೆಟ್ಟಿ ಹೂವಿನಿಂದ ಮಾಡಿದ ರಂಗೋಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಲಭಿಸಿದೆ.

ಹೂವಿನಿಂದ ಮಾಡಿದ ಅತಿ ದೊಡ್ಡ ರಂಗೋಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ರಂಗೋಲಿಗೆ ಕಂಗುಲಾಬಿ, ಮಲ್ಲಿಗೆ, ಕೇಸರಿ ಹಾಗೂ ಹಳದಿ ಬಣ್ಣದ ಚೆಂಡು ಹೂ ಸೇರಿದಂತೆ ವಿವಿಧ ಬಣ್ಣಗಳ ಹೂಗಳನ್ನು ಬಳಸಿ ರಂಗೋಲಿ ರಚಿಸಲಾಗಿತ್ತು.

ಈ ರಂಗೋಲಿ 8 ಫೀಟ್ ಅಗಲದಲ್ಲಿದ್ದು ಸುಮಾರು 1 ಗಂಟೆ 40 ನಿಮಿಷದಲ್ಲಿ ರಚಿಸಿದ್ದು ಗಮನ ಸೆಳೆದಿತ್ತು. ಇಂಡಿಯಾ ಬುಕ್ ಆಫ್ ಕೆಕಾರ್ಡ್ಸ್ ನಲ್ಲಿ ಅತೀ ದೊಡ್ಡ ಹೂವಿನ ರಂಗೋಲಿ ಎಂದು ಸೇರ್ಪಡೆಯಾಗಿರುವ ವಿಚಾರ 2025ರ ಫೆಬ್ರವರಿ 3ರಂದೇ ದೃಢಪಟ್ಟಿತ್ತು, ಆದರೆ ಸರ್ಟಿಫಿಕೇಟ್ ಅಧಿಕೃತವಾಗಿ ಎ. 4ರಂದು ಶ್ರದ್ಧಾ ಶೆಟ್ಟಿ ಕೈ ಸೇರಿದ ಕಾರಣ ಕುಟುಂಬ ಸಂತಸ ಹಂಚಿಕೊಂಡಿದೆ.

ಶ್ರದ್ಧಾ ಪ್ರಸ್ತುತ ಎಸ್.ಡಿ.ಎಂ.ನಲ್ಲಿ ಬಿ.ಎಸ್.ಸಿ ಅಧ್ಯಯನ ಮಾಡುತ್ತಿದ್ದು, ಈ ವಿಭಿನ್ನ ಗೌರವ ಲಭಿಸಿದ್ದು ಸಂತಸ ತಂದಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

Exit mobile version