Site icon Suddi Belthangady

ಸೇವಾಭಾರತಿಗೆ CR3 ಪ್ರೈವೇಟ್ ಕಂಪೆನಿಯಿಂದ ರೂ. 5ಲಕ್ಷ ದೇಣಿಗೆ

ಕನ್ಯಾಡಿ: ಮಂಗಳೂರು CR3 (India)ಪ್ರೈವೇಟ್ ಲಿಮಿಟೆಡ್ ನ ಸೀನಿಯರ್ ಹೆಚ್.ಆರ್. ಎಕ್ಸಿಕ್ಯೂಟಿವ್ ಗಣೇಶ ಟಿ. ಸೇವಾನಿಕೇತನಕ್ಕೆ ಭೇಟಿ ನೀಡಿ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಕಂಪೆನಿಯಿಂದ ರೂ. 5ಲಕ್ಷದ ಚೆಕ್ ನೀಡಿ ಕಟ್ಟಡದ ನಿರ್ಮಾಣ ಶೀಘ್ರ ನೆರವೇರುವಂತೆ ಶುಭಹಾರೈಸಿದರು.

ಸೇವಾಧಾಮ ಸಂಸ್ಥೆಯ ಸಂಚಾಲಕ ಕೆ. ಪುರಂದರ ರಾವ್ ಮತ್ತು ಸೇವಾಭಾರತಿ ಸಂಸ್ಥೆಯ ಅಧ್ಯಕ್ಷೆ ಸ್ವರ್ಣಗೌರಿ ಇದನ್ನು ಸಿಬ್ಬಂದಿಯೊಂದಿಗೆ ಸ್ವೀಕರಿಸಿ ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು.

Exit mobile version