ಬಂದಾರು: ಓಟೆಚ್ಚಾರ್ ವಿ ಮುಹಮ್ಮದ್ ಇವರ ಮನೆ ಬಳಿ ಕಳೆದ ರಾತ್ರಿ ಒಂಟಿ ಸಲಗ ಉಪಟಳ ನೀಡಿದ್ದು, ಶಾಂತಪ್ಪ ಗೌಡರ ಪೈಪು ಒಡೆದು ಹಾಕಿದ್ದು ಮುಹಮ್ಮದ್ ರವರ ಎರಡು ಈಂದ್ ಗಿಡ ಮಗುಚಿ ಹಾಕಿದೆ. ಆನೆ ಗರ್ನಾಲ್ ಎಸೆದು ಹೆದರಿಸಿದ ಕಾರಣ ಬಾರೀ ಗೀಳಿಟ್ಟು ನೇತ್ರಾವತಿ ನದಿ ದಾಟಿ ನಿರ್ಗಮಿಸಿದ ಗಜ 11 ಗಂಟೆಯ ಸಮಯ ರಾತ್ರಿ ಅಬ್ಬಾಸ್ ಬಟ್ಲಡ್ಕ ಇವರ ಡ್ರಂ ಒಂದು ಹುಡಿ ಮಾಡಿದ್ದು ಒಂದು ವಾರದಿಂದ ಪ್ರತಿ ರಾತ್ರಿ ಉಪಟಳ ನೀಡಿರುತ್ತದೆ.
ಅರಣ್ಯ ಅಧಿಕಾರಿಗಳು ಭೇಟಿ ನೀಡುತ್ತಿದ್ದು ಏನಾದರೂ ಪರಿಯಾಯ ವ್ಯವಸ್ಥೆ ಮಾಡಬೇಕೆಂದು ಊರಿನವರ ಒತ್ತಾಯ ಮಾಡಿದ್ದಾರೆ.