ಬೆಳ್ತಂಗಡಿ: ಶ್ರೀ ಗುರುದೇವಾ ಪ್ರಥಮದರ್ಜೆ ಕಾಲೇಜಿನ ಅಂತಿಮ ವರ್ಷದ ಬಿ. ಕಾಂ. ತರಗತಿಯಲ್ಲಿ ಅಭ್ಯಸಿಸುತ್ತಿರುವ ವಿಧ್ಯಾರ್ಥಿ ಕೀರ್ತನ್ 9 ನಿಮಿಷ,12ಸೆಕೆಂಡುಗಳಲ್ಲಿ 10ಸೆಂ. ಮೀಟರ್ ಅಳತೆಯ ಭಗತ್ ಸಿಂಗ್ ಚಿತ್ರಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ ದಕ್ಕಿಸಿಕೊಂಡಿದ್ದಾರೆ.
ಕೇವಲ ಗಮ್ ಹಾಗೂ ಸಾಸಿವೆಯನ್ನು ಬಳಸಿ ಈ ಚಿತ್ರ ಮೂಡಿ ಬಂದಿದೆ. ಬಾಲ್ಯದಲ್ಲಿಯೇ ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ಇದ್ದು ಈ ಸಾಧನೆ ಮಾಡುವುದಕ್ಕೆ ಪೂರಕವಾಯಿತು ಎಂದಿದ್ದಾರೆ. ಸಾಧನೆಯ ಪ್ರತೀಕವಾಗಿ ಪದಕ, ಪ್ರಮಾಣಪತ್ರ, ಬ್ಯಾಜ್ ಪಡೆದಿದ್ದಾರೆ.
ಈ ಸಾಧನೆಗೆ ಶ್ರೀ ಗುರುದೇವಾ ಕಾಲೇಜಿನ ಅಧ್ಯಕ್ಷೆ ಪ್ರೀತಿತಾ ಧರ್ಮ ವಿಜೇತ್ ಶ್ಲಾಘನೆ ವ್ಯಕಪಡಿಸಿದ್ದು, ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಭೋಧಕ, ಭೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಲ್ಲದೆ ಶ್ರೀ ಗುರುದೇವಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ ಸಾಂಸ್ಕೃತಿಕ, ಕ್ರೀಡೆ ಹಾಗೂ ಎಲ್ಲಾ ರಂಗದಲ್ಲೂ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ ಮುಂದೆಯೂ ಸದಾ ಪ್ರೋತ್ಸಾಹ ಇರುವುದಾಗಿ ಕಾಲೇಜಿನ ಆಡಳಿತ ಮಂಡಳಿ ತಿಳಿಸಿದ್ದಾರೆ.