Site icon Suddi Belthangady

ಮಡಂತ್ಯಾರಿನಲ್ಲಿ ಮ್ಯಾಟ್ರಿಕ್ಸ್ ಫಿಟ್ನೆಸ್ ಮಲ್ಟಿ ಜಿಮ್ ಶುಭಾರಂಭ

ಮಡಂತ್ಯಾರು: ಆಶಿರ್ವಾದ್ ಸಭಾಂಗಣದ ಎದುರು ಇರುವ ಕ್ರಿಸ್ಟಲ್ ಕಾಂಪ್ಲೆಕ್ಸ್ ನಲ್ಲಿ ಮ್ಯಾಟ್ರಿಕ್ಸ್ ಫಿಟ್ನೆಸ್ ಮಲ್ಟಿ ಜಿಮ್ ಏ. 1ರಂದು ಶುಭಾರಂಭಗೊಂಡಿತು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮ ಗುರು ಫಾ. ಸ್ಟ್ಯಾನಿ ಗೋವಿಯಸ್ ಆಶೀರ್ವಾಚನ ನೆರವೇರಿಸಿದರು. ಫಾದರ್ ಮುಲ್ಲಾರ್ಸ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಫಾ. ಅಜಿತ್ ಮಿನೆಜಸ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಮಾಲಕರ ತಂದೆ ಮ್ಯಾಕ್ಸಿಮ್ ಕೊರೆಯ, ತಾಯಿ ಅನಿತಾ ಕೊರೆಯ ವಾಳೆಯ ಗುರಿಕಾರ ನೆಲ್ಸನ್ ಲಾಸ್ರಾದೋ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಮಾಲಕ ಅಲ್ವಿಸ್ ಕೊರೆಯ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ವಂದಿಸಿ ಸರ್ವರ ಸಹಕಾರ ಕೋರಿದರು.

Exit mobile version