Site icon Suddi Belthangady

ಬೆಂಗಳೂರು ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನೇತೃತ್ವದ ತಂಡ

ಬೆಳ್ತಂಗಡಿ: ಬಿಲ್ಲವರ ಅಸೋಸಿಯೇಷನ್ ಅಸೋಸಿಯೇಷನ್ ಬೆಂಗಳೂರು ನೇತೃತ್ವದಲ್ಲಿ ನಡೆಯಲಿರುವ ಕೋಟಿ ಚೆನ್ನಯ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲಿರುವ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ನೇತೃತ್ವದ ತಂಡಕ್ಕೆ ಸಂಘದ ಸಭಾಂಗಣದಲ್ಲಿ ಗೌರವಿಸಿ ಶುಭಹಾರೈಸಿ ಕಳುಹಿಸಿಕೊಡಲಾಯಿತು.

ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಉಪಾಧ್ಯಕ್ಷ ಸುಂದರ ಪೂಜಾರಿ, ಮಾಜಿ ನಿರ್ದೇಶಕ ಸಚಿನ್ ನೂಜೋಡಿ, ಜೊತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು ನಿರ್ದೇಶಕರಾದ ರೂಪೇಶ್ ಧರ್ಮಸ್ಥಳ, ಸಂತೋಷ್ ಕೆ. ಸಿ., ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಯುವಬಿಲ್ಲವ ವೇದಿಕೆಯ ಅಧ್ಯಕ್ಷ ಎಮ್. ಕೆ. ಪ್ರಸಾದ್ ತಂಡದ ಪ್ರಾಯೋಜಕ ರವಿ ದೇಸಿನಕೋಡಿ, ಸುರೇಶ್ ಪುದುವೆಟ್ಟು, ಬಿಜು ಧರ್ಮಸ್ಥಳ, ಟೀಮ್ ಮ್ಯಾನೇಜರ್ ದೇವಿ ಪ್ರಸಾದ್, ಕನ್ಯಾಡಿ ತಂಡದ ಕಪ್ತಾನ ಜಯರಾಜ್, ಉಪ ಕಪ್ತಾನ ಶ್ರೀಕಾಂತ್ ಹಾಗೂ ಆಟಗಾರರು ಉಪಸ್ಥಿತರಿದ್ದರು.

Exit mobile version