Site icon Suddi Belthangady

ಶ್ರೀ ಮಂ. ಸ್ವಾ. ಅ. ಹಿ. ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳ ಇಲ್ಲಿ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಏ.1ರಂದು ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಜಿರೆಯ ಹಿತ ಜೆರಾಕ್ಸ್ ನ ಮಾಲಕಿ ಪೂರ್ಣಿಮಾ ಸಂಜೀವ ಕೆ. ಆಗಮಿಸಿ ಉದ್ಘಾಟನೆಯನ್ನು ನೆರವೇರಿಸಿದರು. ಇವರು ಮಕ್ಕಳಿಗೆ ಹಲವಾರು ರೀತಿಯ ಬಟ್ಟೆಗಳಿಂದ ಹೂವುಗಳ ತಯಾರಿ, ಬೊಕ್ಕೆ ತಯಾರಿಯನ್ನು ಹೇಳಿಕೊಟ್ಟು ರಜೆಯನ್ನು ಸದುಪಯೋಗಪಡಿಸಿಕೊಳ್ಳುವ ರೀತಿಯನ್ನು ಹೇಳಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಕಮಲ್ ತೇಜು ರಜಪೂತ್ ವಹಿಸಿದ್ದರು. ಜೋಸೆಫ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೂರ್ಣಿಮಾ ನಿರ್ವಹಿಸಿದ ಕಾರ್ಯಕ್ರಮಕ್ಕೆ ಕಾವ್ಯ ಸ್ವಾಗತಿಸಿ, ಶ್ರೀಜಾ ವಂದಿಸಿದರು.

Exit mobile version