Site icon Suddi Belthangady

ಕಲ್ಮಂಜ: ಸಿದ್ದಬೈಲು ಸ. ಹಿ. ಪ್ರಾ. ಶಾಲೆಯ ನಿವೃತ್ತ ಶಿಕ್ಷಕ ಶಂಕರ ಎನ್ ತಾಮನ್ಕರ್ ರವರಿಗೆ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭ

ಕಲ್ಮಂಜ: ಸ. ಹಿ. ಪ್ರಾ. ಶಾಲೆ ಸಿದ್ದಬೈಲು ಪರಾರಿಯಲ್ಲಿ ಕಳೆದ 9 ವರ್ಷಗಳಿಂದ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ಇತ್ತಿಚೆಗೆ ನಿವೃತ್ತರಾದ ಶಿಕ್ಷಕ ಕವಿ ಕಲಾವಿದ ಶ್ರೀ ಶಂಕರ ಎನ್ ತಾಮನ್ಕರ್ ಇವರ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭವು ಮಾ. 29ರಂದು ಸಿದ್ದಬೈಲು ಶಾಲೆಯಲ್ಲಿ ಜರುಗಿತು.

7ನೇ ತರಗತಿ ವಿದ್ಯಾರ್ಥಿಗಳ ವಿದಾಯ ಕೂಟವೂ ಇದರೊಂದಿಗೆ ಜರುಗಿತು. ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ದಿನೇಶ ಗೌಡ, ಎಸ್. ಡಿ. ಎಂ. ಸಿ. ಯ ಎಲ್ಲಾ ಸದಸ್ಯರು, ಮುಖ್ಯೋಪಾಧ್ಯಾಯಿನಿ ಧರ್ಣಮ್ಮ, ಊರವರು, ಮಕ್ಕಳ ಪೋಷಕರು, ಹಳೆ ವಿದ್ಯಾರ್ಥಿಗಳು, ಸಹ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅವರನ್ನು ಅಭಿನಂದಿಸಿ, ನೆನಪಿನ ಕಾಣಿಕೆಯನ್ನು ನೀಡಲಾಯಿತು.

ಮಕ್ಕಳೇ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಧರ್ಣಮ್ಮ, ಮಮತಾ ಮತ್ತು ವಿದ್ಯಾರ್ಥಿಗಳು ಅಭಿನಂದನಾ ಭಾಷಣ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು. ಸಿಹಿ ಊಟದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Exit mobile version