Site icon Suddi Belthangady

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ) ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ.30ರಿಂದ ಪ್ರಾರಂಭಗೊಂಡು ಎ. 5ರವರೆಗೆ ನಡೆಯಲಿದೆ. ಮಾ. 31ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಾತ್ರಾಸಮಿತಿ ಗೌರವಾಧ್ಯಕ್ಷ ಬಿ.ಕೆ ಧನಂಜಯ ರಾವ್ ವಕೀಲರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಶಾಸಕ ಪ್ರತಾಪ್ ಸಿಂಹ ನಾಯಕ್ ಉದ್ಘಾಟಿಸಿದರು.

ಮಂಗಳೂರು ಗೋಕರ್ಣಾಥೇಶ್ವರ ಕಾಲೇಜು ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡಿದರು. ಗೌರವ ಉಪಸ್ಥಿತಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ, ಜಾತ್ರಾ ಸಮಿತಿ ಅಧ್ಯಕ್ಷ ಸುಧಾಕರ ಪೂಜಾರಿ, ಮುಖ್ಯ ಅತಿಥಿಗಳಾಗಿ ಅರುಣ ಕುಮಾರ್ ಎಂ.ಎಸ್ ಉದ್ಯಮಿ ಉಜಿರೆ, ಕೊಲ್ಲಿ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ರಾವ್ ಕಕ್ಕೆನೇಜಿ, ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ವಿನಯಚಂದ್ರ ಗೌಡ, ಬಂಗಾಡಿ ಸಿ. ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲಿಯಾನ್, ಮಂಗಳ ಆಸ್ಪತ್ರೆ ಮಂಗಳೂರಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ದಿಲೀಪ್‌ ಕುಮಾ‌ರ್, ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಪ್ಪ ಪೂಜಾರಿ, ಭಾರತೀಯ ಮದ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್‌ ಕುಮಾರ್ ಉಪಸ್ಥಿತರಿದ್ದರು.

ಈ ವೇಳೆ ಭಜನೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡ ಪಿ.ಎಸ್ ಚಂದ್ರಶೇಖರ ರಾವ್‌ ಕೊಲ್ಲಿಪಾಲ್ ರವರನ್ನು ಸನ್ಮಾನಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಜಾತ್ರಾ ಸಮಿತಿ ಸದಸ್ಯರು, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

ಅಂಕಿತಾ, ಗಾಯತ್ರಿ, ಪ್ರಣಮ್ಯ, ದೀಕ್ಷಿತಾ ಪ್ರಾರ್ಥಿಸಿ, ಜಾತ್ರಾ ಸಮಿತಿ ಗೌರವಾಧ್ಯಕ್ಷ ವಕೀಲರು ಬಿ.ಕೆ ಧನಂಜಯ ರಾವ್ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಜಯಂತ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ತೀಕ್ಷಿತ್ ಗೌಡ ಕಲ್ಲಬೆಟ್ಟು ಧನ್ಯವಾದವಿತ್ತರು.

ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶ್ರೀ ದುರ್ಗಾದೇವಿ ಸನ್ನಿಧಿಯಲ್ಲಿ ಬಲಿ ಪೂಜೆ, ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ಮಂದಾರ ಕಲಾವಿದರು ಉಜಿರೆ ಇವರಿಂದ ‘ಮಾಯಾದ ತುಡರ್’ ತುಳು ಭಕ್ತಿ ಪ್ರಧಾನ ನಾಟಕ ನಡೆಯಿತು.

Exit mobile version