Site icon Suddi Belthangady

ಬೆಳ್ತಂಗಡಿ: ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಈದ್ ಉಲ್ ಫಿತರ್ ಹಾಗೂ ಗುರುವಾಯನಕೆರೆ ದರ್ಗಾ ಝಿಯಾರತ್

ಬೆಳ್ತಂಗಡಿ: ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಈದ್ -ಉಲ್ – ಫಿತ್ರ್ ಹಬ್ಬದ ಆಚರಣೆ ಬೆಳ್ತಂಗಡಿ ಹೃದಯ ಭಾಗವಾಗಿರುವ ಕೋರ್ಟ್ ರಸ್ತೆಯಲ್ಲಿರುವ ಗೌಸಿಯಾ ಜಾಮಿಯಾ ಮಸೀದಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಈದ್ ನ ವಿಶೇಷ ನಮಾಝ್ ಬಳಿಕ ಮಸೀದಿಯಲ್ಲಿ ದುವಾಕ್ಕೆ ಸಯ್ಯಿದ್ ಗುಲ್ರೆಝ್ ಅಹ್ಮದ್ ರಝಿ ನೇತೃತ್ವ ನೀಡಿದರು. ಸೇರಿದ ಸರ್ವರೂ ಹಬ್ಬದ ಶುಭಾಶಯವನ್ನು ವಿನಿಮಯವನ್ನು ಮಾಡಿಕೊಂಡರು. ಹಾಗೂ ಏ. 11 ಮತ್ತು 12ರಂದು ನಡೆಯಲಿರುವ ಬ್ರಹತ್ ವಾರ್ಷಿಕ ಜಾಲಾಲಿಯ್ಯ ರಾತೀಬ್ ನ ಯಶಶ್ವಿಗಾಗಿ ಇದೆ ಸಂದರ್ಭ ಕರೆ ನೀಡಲಾಯಿತು.

ತದನಂತರ ಹಝ್ರತ್ ಶೇಖ್ ಹಯಾತುಲ್ ಔಲಿಯ ದರ್ಗಾ ಶರೀಫ್ ಗುರುವಾಯನಕೆರೆಗೆ ತೆರಳಿ ವಿಶ್ವ ಶಾಂತಿಗಾಗಿ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು. ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವುದೇ ಎಲ್ಲಾ ಧರ್ಮಗಳಲ್ಲಿರುವ ಹಬ್ಬಗಳ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಅಧ್ಯಕ್ಷ ಮಹಮ್ಮದ್ ರಫೀಯವರು ತಿಳಿಸುತ್ತ ನಾಡಿನ ಸಮಸ್ತ ಜನತೆಗೆ ಹಬ್ಬದ ಶುಭಾಶಯವನ್ನು ಕೋರಿದರು.

Exit mobile version