Site icon Suddi Belthangady

ಉಜಿರೆಯ ಆದಿತ್ಯ ಕೃಷ್ಣ ಕಾರಂತ್ ರಾಷ್ಟ್ರಮಟ್ಟದ ರಸಪ್ರಶ್ನೆಗೆ ಆಯ್ಕೆ- ಪಾಂಡಿಚೇರಿಯಲ್ಲಿ ಅಂತಿಮ ಸುತ್ತು

ಉಜಿರೆ: ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ಮತ್ತು ಉಜಿರೆ ಗ್ರಾ.ಪಂ.ಅಧ್ಯಕ್ಷೆ ಉಷಾಕಿರಣ್ ಕಾರಂತ್ ರವರ ಪುತ್ರ‌ ಆದಿತ್ಯ ಕೃಷ್ಣ ಕಾರಂತ್ ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಹಾಸನ ಇನ್ಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸ್ ಕಾಲೇಲಿನಲ್ಲಿ ಮೂರನೇ ವರ್ಷದ ಎಂ. ಬಿ. ಬಿ‌. ಎಸ್ ಪದವಿ ವ್ಯಾಸಂಗ ಮಾಡುತ್ತಿರುವ ಆದಿತ್ಯ ಕೃಷ್ಣ, ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯ ಆರಂಭಿಕ ಸುತ್ತಿನಲ್ಲಿ ಗೆದ್ದು, ಅಂತಿಮ‌ ಸುತ್ತು ಪ್ರವೇಶಿಸಿದ್ದಾರೆ. ಏ. 4ರಿಂದ 6ರವರೆಗೆ ಪಾಂಡಿಚೇರಿಯ JIPMER ಕಾಲೇಜಿನಲ್ಲಿ ರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಇವರು ಹಿಮ್ಸ್ ಕ್ರಿಕೆಟ್ ತಂಡದ ನಾಯಕನಾಗಿದ್ದಾರೆ.

Exit mobile version