Site icon Suddi Belthangady

ದೀಪ್ತಿಶ್ರೀ ಕರಾಯ ಇವರಿಗೆ ಎಂ.ಎ. ಮಾಸ್ಟರ್ ಡಿಗ್ರಿಯಲ್ಲಿ ಚಿನ್ನದ ಪದಕ

ಬೆಳಾಲು: ದಿ. ಸಾಂತಪ್ಪ ನಾಯ್ಕ ಮತ್ತು ಸುಶೀಲ ದಂಪತಿಯ ಮೊಮ್ಮಗಳು, ಕರಾಯದ ನಳಿನಿ ಮತ್ತು ಮೋನಪ್ಪ ದಂಪತಿಯ ಪುತ್ರಿ ಕುಮಾರಿ ದೀಪ್ತಿಶ್ರೀ ಮಂಗಳೂರು ವಿಶ್ವ ವಿದ್ಯಾಲಯದ ಮಂಗಳ ಗಂಗೋತ್ರಿಯಲ್ಲಿ ಈ ವರ್ಷ ನಡೆದ ಎಂ.ಎ. ಸಮಾಜಶಾಸ್ತ್ರ ಮಾಸ್ಟರ್ ಡಿಗ್ರಿಲ್ಲಿ ಅತ್ಯುತ್ತಮ ಸಾಧನೆ ಮಾಡಿ ಪ್ರಥಮ ಸ್ಥಾನ ಪಡೆದುಕೊಂಡು ಒಂದು ಚಿನ್ನದ ಪದಕ ಪದಕದೊಂದಿಗೆ ನಗದು ಪುರಸ್ಕಾರ ಕೂಡ ಪಡೆದಿರುತ್ತಾರೆ.

ಮಾ. 29ರಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 43ನೇ ವರ್ಷದ ಘಟಕೋತ್ಸವದಲ್ಲಿ ಗಣ್ಯ ಅತಿಥಿಗಳಿಂದ ತನ್ನ ತಂದೆಯ ಸಮ್ಮುಖದಲ್ಲಿ ಈ ಹೆಮ್ಮೆಯ ಸಾಧನೆಗಾಗಿ ಪಾರಿತೋಷಕದೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡರು.

Exit mobile version