Site icon Suddi Belthangady

ಬೆಳ್ತಂಗಡಿ: ಶ್ರೀ ಧ. ಮ. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಜೂನಿಯರ್ ರೆಡ್ ಕ್ರಾಸ್ ಪರೀಕ್ಷೆ ಯಲ್ಲಿ ವಿಶಿಷ್ಟ ಶ್ರೇಣಿ

ಬೆಳ್ತಂಗಡಿ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಜೂನಿಯರ್ ರೆಡ್ ಕ್ರಾಸ್ ವಿಧ್ಯಾರ್ಥಿಗಳು ರಾಜ್ಯ ಮಟ್ಟದ ಜೂನಿಯರ್ ರೆಡ್ ಕ್ರಾಸ್ ಪರೀಕ್ಷೆಯಲ್ಲಿ ಬೃಂದಾ ಎಸ್. 8 ನೇ ತರಗತಿ ಇವರು ವಿಶಿಷ್ಟ ಶ್ರೇಣಿಯನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳಾದ ದೀಪ್ತಾ , ಜಸ್ವಿತಾ, ಸಂಪ್ರೀತ್, ಸಮ್ಯಕ್, ಶಿಯಾನ ಸೈಫಾ, ಶ್ರೀ ರಕ್ಷಾ, ಶ್ರೀತಾ ಎಸ್, ಶ್ರೀತನ್, ಸ್ಪಂದನ್, ತನಿಷಿ, ವಿನ್ಯಾಸ್ , ವೃಷಭ್, ಯಶಸ್ವಿ, ಎ ಕೆ ಮುಷ್ಪಿರಾ, ದಿಷಾ ಪೈ, ಪರಿಣಿತ, ಸಾನ್ವಿ, ಶೇಕ್ ಮನ್ಸೂರ್ ನಿಹಾದ್ ಪ್ರಥಮ ಶ್ರೇಣಿಯನ್ನು ಪಡೆದಿರುತ್ತಾರೆ.

ರಾಕೇಶ್ ಕೆ ದ್ವಿತೀಯ ಶ್ರೇಣಿಯನ್ನು ಪಡೆದಿರುತ್ತಾರೆ. ಜೂನಿಯರ್ ರೆಡ್ ಕ್ರಾಸ್ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಲಭಿಸಿರುತ್ತದೆ. ಮುಖ್ಯ ಶಿಕ್ಷಕಿ ಹೇಮಲತಾ ಎಂ. ಆರ್. ರವರ ಮಾರ್ಗದರ್ಶನದಲ್ಲಿ ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್, ಜಿಲ್ಲಾ ರೆಡ್ ಕ್ರಾಸ್ ಪ್ರೋಗ್ರಾಮ್ ಆರ್ಗನೈಸರ್ ಕಮಿಟಿ ಸದಸ್ಯೆ ಪ್ರಮೀಳಾ ಹಾಗೂ ಶಿಕ್ಷಕ ಮಂಜುನಾಥ್ ಸಹಕಾರದೊಂದಿಗೆ ವಿದ್ಯಾರ್ಥಿಗಳು ಜೂನಿಯರ್ ರೆಡ್ ಕ್ರಾಸ್ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.

Exit mobile version