Site icon Suddi Belthangady

ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ‘ಮೈ ನೆಕ್ಸ್ಟ್ ಸ್ಟೆಪ್’ ಕಾರ್ಯಕ್ರಮ

ಉಜಿರೆ: ಮಾ 28ರಂದು ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಕಿಂಡರ್ ಗಾರ್ಟನ್ ವಿಭಾಗದಿಂದ ಹೊರಹೋಗುವ ವಿದ್ಯಾರ್ಥಿಗಳಿಂದ ‘ಮೈ ನೆಕ್ಸ್ಟ್ ಸ್ಟೆಪ್’ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಿಂಡರ್ಗಾರ್ಟನ್ ಯು.ಕೆ.ಜಿ ಎ ಹಾಗೂ ಬಿ ವಿಭಾಗಗಳ ಮಕ್ಕಳಿಂದ ಸಂಯುಕ್ತವಾಗಿ ಸೀಡ್ ಜರ್ಮಿನೇಶನ್, ಕಮ್ಯೂನಿಟಿ ಹೆಲ್ಪರ್ಸ್, ಡೂ ಅವರ್ ಡ್ಯೂಟಿ, ಥೀಮ್ ಡ್ಯಾನ್ಸ್ ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

ಸಾನಿಧ್ಯ ಮಯ್ಯ ಗಾಳಿಪಟ ಚಿತ್ರ ರಚಿಸಿ ಕಲಾಕುಂಚ ಪ್ರತಿಭೆ ಪ್ರದರ್ಶಿಸಿದರು. ಅಕ್ಷರಾ ಪಾರ್ವತಿ, ಆರಾಧನಾ ಕುಲಾಲ್ ತಮ್ಮ ಕಿಂಡರ್ ಗಾರ್ಟನ್ ಜರ್ನಿ ಬಗ್ಗೆ ಅನಿಸಿಕೆ ಹಂಚಿಕೊಂಡರು.

ಮಾತೃ-ಪಿತೃ ವಂದನ: ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ ಪ್ರಾಥಮಿಕ ಶಿಕ್ಷಣಕ್ಕೆ ಅಡಿಯಿಡುತ್ತಿರುವ ಪುಟಾಣಿಗಳು ತಮ್ಮ ತಂದೆ-ತಾಯಿಯರಿಗೆ ಆರತಿ ಬೆಳಗಿ ಆಶೀರ್ವಾದ ಪಡೆದರು.

ಸಭಾ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಮನಮೋಹನ್ ನಾಯ್ಕ್ ಕೆ.ಜಿ ಮಕ್ಕಳಿಗೆ ಶುಭಾಶಯ ಹಾರೈಸಿದರು. ಕಾರ್ಯಕ್ರಮದ್ಲಲಿ ಕಿಂಡರ್ ಗಾರ್ಟನ್ ಶಿಕ್ಷಕಿಯರು, ಪೋಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಮಕ್ಕಳ ಪಾಲಕರಾದ ಸವಿತಾ, ಜಯಶ್ರೀ, ಸತೀಶ್ ಆಚಾರ್, ಮಮತಾ ಕೆ., ರಾಧಿಕ ಅನಿಸಿಕೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಾದ ಆರಾಧನಾ ಕುಲಾಲ್, ರಶ್ಮಿಕಾ ರಮೆಶ್, ಪ್ರಾಧ್ಯಾ ಪ್ರದೀಪ್, ಅಕ್ಷರ ಪಾರ್ವತಿ, ಸಾನಿಧ್ಯ ಮಯ್ಯ, ಆದ್ಯಾ ಹೊಳ್ಳ ಪ್ರಾರ್ಥಿಸಿದರು.

ಸಹರ್ಷ್ ಎಸ್. ಸ್ವಾಗತಿಸಿದರು. ಮಹಮ್ಮದ್ ಬಿಶ್ರುಲ್ ಹಾಫಿ ವಂದಿಸಿದರು.

Exit mobile version