Site icon Suddi Belthangady

ಬಂದಾರು: ಸಿದ್ದಿ ವಿನಾಯಕ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ಬಂದಾರು: ಸಿದ್ದಿ ವಿನಾಯಕ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ ಮಾ. 28ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷೆ ಚಿತ್ರ ಅಧ್ಯಕ್ಷತೆ ವಹಿಸಿದ್ದರು.

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಉಪಾಧ್ಯಕ್ಷೆ ಪುಷ್ಪಾವತಿ ಬರಮೇಲು, ಸದಸ್ಯರಾದ ಅನಿತಾ ಉದಯ ಕುರುಡಂಗೆ, ಭಾರತಿ ಕೊಡಿಯೇಲು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ವಲಯ ಮೇಲ್ವಿಚಾರಕಿ ವೀಣಾಶ್ರೀ, ಪದಾಧಿಕಾರಿಗಳಾದ ಸುರೇಖಾ, ಉಷಾ, ಪುಷ್ಪಾವತಿ, ಶೀಲಾವತಿ, ಭವ್ಯ, ತೀರ್ಥಶ್ರೀ, ಸುಚಿತ್ರ, ಗೀತಾ ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕರು ಮಹಾಸಭೆಯ ಬಗ್ಗೆ ಮತ್ತು ಸಂಜೀವಿನಿಯ ಧ್ಯೇಯ ಉದ್ದೇಶಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ.ಕೆ ಭಾಗ್ಯಶ್ರೀ 2023 -24ರ ವಾರ್ಷಿಕ ವರದಿಯನ್ನು ಮಂಡನೆ ಮಾಡಿದರು. ಸಂಘದ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು.

2023-24ರ ಜಮಾ ಮತ್ತು ಖರ್ಚಿನ ಬಗ್ಗೆ ಎಲ್.ಸಿ.ಆರ್.ಪಿ ಹರ್ಷಿಣಿ ವರದಿ ಮಾಡಿದರು. ಅತ್ಯುತ್ತಮ ಸಂಘವನ್ನು ಗುರುತಿಸಿ ಸ್ಮರಣಿಕೆ ನೀಡಲಾಯಿತು. ಮಹಾಸಭೆಗೆ ಅತೀ ಹೆಚ್ಚು ಸದಸ್ಯರು ಭಾಗವಹಿಸಿದ 4 ಸಂಜೀವಿನಿ ಸ್ವಸಹಾಯ ಸಂಘಕ್ಕೆ ಸ್ಮರಣಿಕೆ ನೀಡಲಾಯಿತು.

ಹಳೆ ಪದಾಧಿಕಾರಿಗಳಿಂದ ಹೊಸ ಪದಾಧಿಕಾರಿಗಳಿಗೆ ದಾಖಲಾತಿ ಹಸ್ತಾಂತರ ಮಾಡಿ ಪದಗ್ರಹಣ ಮಾಡಲಾಯಿತು. ಬೀಳ್ಕೊಟ್ಟ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಗೂ ಮಾಜಿ ಎಂ.ಬಿ.ಕೆ ಗೆ ಗೌರವ ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು. ಅದೇ ರೀತಿ ಶೀಲಾವತಿಯವರನ್ನು ಸನ್ಮಾನ ಮಾಡಲಾಯಿತು.

ಲಕ್ಷ್ಮೀ ಸ್ವಾಗತಿಸಿದರು. ಭಾಗ್ಯಶ್ರೀ ಎಂ.ಬಿ.ಕೆ ನಿರೂಪಿಸಿದರು. ಮಹಾಸಭೆಯ ಉಸ್ತುವಾರಿಯನ್ನು ಎಲ್.ಸಿ.ಆರ್. ಪಿ ಪವಿತ್ರ ವಹಿಸಿದ್ದರು. ಚಂದ್ರಿಕಾ ವಂದನಾರ್ಪಣೆ ಮಾಡಿದರು.

Exit mobile version