ಶಿಬರಾಜೆ: ಮಾ. 26ರಂದು ಜೆ.ಸಿ.ಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ದಯಾಲ್ ಬಾಗ್ ಸಭಾಂಗಣ ಶಿಬರಾಜೆ ಪಾದೆ, ವೇದಿಕೆಯಲ್ಲಿ ಕ್ಯಾನ್ಸರ್ ಜಾಗ್ರತಿ ಮತ್ತು ಆಹಾರ ಪದ್ಧತಿ ತರಬೇತಿ ಆಯೋಜಿಸಲಾಯಿತು. ಈ ತರಬೇತಿಯಲ್ಲಿ ಎಸ್. ಡಿ. ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯ ನರ್ಸಿಂಗ್ ಸುಪರಿಡೆಂಟ್ ಶೇರ್ಲಿಯವರು ಕ್ಯಾನ್ಸರ್ ಮುನ್ನೆಚ್ಚರಿಕೆ, ಪೌಷ್ಟಿಕ ಆಹಾರ ಮತ್ತು ಸರಿಯಾದ ದಿನಚರಿಯ ಪ್ರಭಾವವನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ದೀಪಿಕಾ, ಅತಿಥಿಗಳ ಪರಿಚಯವನ್ನು ಶ್ರವಣ್ ವಾಚಿಸಿದರು. ವಿಮುಕ್ತಿ ಸ್ವಸಹಾಯ ಸಂಘಗಳ ಟ್ರಸ್ಟ್ ಇದರ ವಲಯ ಮೇಲ್ವಿಚಾರಕರಾದ ರೋಹಿಣಿ ಮತ್ತು ದೀಪ ಕಾರ್ಯಕ್ರಮದ ಅನಿಸಿಕೆಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಪೂರ್ವಧ್ಯಕ್ಷರಾದ ಶ್ರೀದರ್ ರಾವ್, ವಿಕ್ಟರ್ ಸುವಾರಿಸ್ ಮತ್ತು ವಿಮುಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ಡಾ. ಶೋಭಾ ಪಿ. ಸ್ವಾಗತಿಸಿದರು. ಆಯುಷ್ ಜೈನ್ ಜೇಸಿವಾಣಿ ವಾಚಿಸಿದರು. ದೀಪಿಕಾ ಕಾರ್ಯಕ್ರಮ ನಿರೂಪಿಸಿ, ಚಂದನ ಪಿ. ವಂದಿಸಿದರು.