ಬೆಳ್ತಂಗಡಿ: ತಾಲೂಕು ಕಚೇರಿಗೆ ಮಾ. 27ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದಿಢೀರ್ ಭೇಟಿ ನೀಡಿದ್ದಾರೆ.
ನಂತರ ಸುದ್ದಿ ಚಾನೆಲ್ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ದ.ಜಿಲ್ಲೆಯಲ್ಲಿ ಬೆಳ್ತಂಗಡಿ ಬಹಳ ದೊಡ್ಡ ತಾಲೂಕು. ಇಲ್ಲಿ ಪ್ಲಾಟಿಂಗ್ ಸಮಸ್ಯೆ ಇರುವುದರಿಂದ ಅದನ್ನು ಬಗೆಹರಿಸಲು ಯಾವ ರೀತಿ ಕ್ರಮ ಕೈಗೊಳ್ಳಬಹುದು ಅನ್ನುವುದರ ಕುರಿತು ಸಂಬಂಧ ಪಟ್ಟ ಸಿಬ್ಬಂದಿ ಗಳ ಜೊತೆ ಚರ್ಚಿಸಿದರು.
ತಾಲೂಕು ಕಚೇರಿಯಲ್ಲಿ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಬಹಳ ದೊಡ್ಡ ಸಮಸ್ಯೆ ಪ್ಲಾಟಿಂಗ್ ಸಮಸ್ಯೆ. ಬಹಳ ವರ್ಷಗಳಿಂದ ಪ್ಲಾಟಿಂಗ್ ಅರ್ಜಿ ಹಾಕಿದ್ದು, ಕಳೆದ 8 ವರ್ಷಗಳಿಂದ ಅದರ ಕೆಲಸಗಳು ಆಗುತ್ತಿಲ್ಲ. ರಾಜ್ಯ ಸರ್ಕಾರದ ಸೂಚನೆಯಂತೆ ಡ್ರೈವ್ ಮಾಡುತ್ತಿದ್ದೇವೆ.ಇದಕ್ಕೆ ಜನರ ಸಹಕಾರ ಬೇಕು ಅಂದರು.