Site icon Suddi Belthangady

ಮಾ.30: ಓಡದಕರಿಯ ಜಾತ್ರಾ ಮಹೋತ್ಸವ

ಲಾಯಿಲ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಓಡದಕರಿಯ ಲಾಯಿಲ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ಮಾ. 30ರಂದು ಎಸ್. ಗೋಪಾಲಕೃಷ್ಣ ಉಪಾಧ್ಯಾಯರ ಅಸ್ರಣ್ಣಕುತ್ತೊಟ್ಟು ಇಂದಬೆಟ್ಟು ಇವರ ನೇತೃತ್ವದಲ್ಲಿ ಹಾಗೂ ಬನ್ನಡ್ಕ ಶ್ರೀಕಾಂತ್ ತಂತ್ರಿಯವರ ಪೌರೋಹಿತ್ಯದಲ್ಲಿ ಜರಗಲಿದೆ.

ಮಾ.30ರಂದು ಬೆಳಿಗ್ಗೆ ಪ್ರಾರ್ಥನೆ, ಪುಣ್ಯಾಹ, 12 ತೆಂಗಿನಕಾಯಿ ಗಣಹೋಮ, ತೋರಣ ಮಹೂರ್ತ, ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಅಶ್ವತ ಪೂಜೆ, ನವಕ ಪ್ರಧಾನ ಹೋಮ ಹಾಗೂ ಕಲಶಾಭಿಷೇಕ, ಮಧ್ಯಾಹ್ನ ಚಂಡಿಕಾಹೋಮ ಪೂರ್ಣಾಹುತಿ, ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ, ಸಂಜೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮೈಸಂದಾಯ ಲೆಕ್ಕೆಸಿರಿ, ಜುಮಾದಿ ಬಂಟ-ಹಾಗೂ ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ಜರಗಲಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಲಿದೆ.

Exit mobile version