Site icon Suddi Belthangady

ರಂಗಸಿರಿ ಯಕ್ಷಗಾನ ತರಬೇತಿ ಉದ್ಘಾಟನೆ

ಪದ್ಮುಂಜ: ಸ. ಪ್ರೌ. ಶಾಲೆಯ ಸಭಾಭವನದಲ್ಲಿ ರಂಗಸಿರಿ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನೆ ಮಾ.26ರಂದು ಮಾಡಲಾಯಿತು. ಈ ಕಾರ್ಯಕ್ರಮವನ್ನು ನಾರಾಯಣಗೌಡ ಮುಚ್ಚುರು ಉದ್ಘಾಟಿಸಿ, ಮಕ್ಕಳಿಗೆ ಶುಭವನ್ನು ಹಾರೈಸಿದರು. ಅಧ್ಯಕ್ಷತೆಯನ್ನು ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರಾಘವ ಗೇರುಕಟ್ಟೆ, ಯಕ್ಷಗಾನ ಅಕಾಡೆಮಿ ಸದಸ್ಯರು ಹಾಗೂ ಭರತನಾಟ್ಯ ನೃತ್ಯ ಗುರುಗಳಾದ ವಿದುಷಿ ಡಿಂಪಲ್ ಉಪಸ್ಥಿತರಿದ್ದರು. ಹಾಗೆಯೇ ಕಿರಣ್ ಪುಷ್ಪಗಿರಿರವರು ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳಿಗೆ ಶುಭ ಹಾರೈಸಿ ಸಿಹಿ ತಿಂಡಿಗಳನ್ನು ಹಂಚಿದರು. ಸಂಧ್ಯಾ ಆನಂದ್ ಕಾರ್ಯಕ್ರಮವನ್ನು ನಿರೂಪಿಸಿದರು. ಯಕ್ಷ ಗುರು ವಂದಿಸಿದರು.

Exit mobile version