Site icon Suddi Belthangady

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರ ಮತ್ತು ಸೆಂಟ್ ಮೇರಿಸ್ ಆರ್ಲ ಚರ್ಚ್ ನಲ್ಲಿ ಸೆಂಟ್ ಜೋಸೆಫ್ ಹಬ್ಬ ಮತ್ತು ಪಿತೃವಂದನಾ ಕಾರ್ಯಕ್ರಮ

ಬೆಳ್ತಂಗಡಿ: ಧರ್ಮ ಪ್ರಾಂತ್ಯದ ಎರಡು ಪ್ರಮುಖ ಚರ್ಚ್ ಗಳಾದ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ಮತ್ತು ಸೆಂಟ್ ಮೇರಿಸ್ ಚರ್ಚ್ ಆರ್ಲ ಇಲ್ಲಿ ಧಾರ್ಮಿಕ ಹಾಗೂ ವಿವಿಧ ಮನೋರಂಜನ ಕಾರ್ಯಕ್ರಮಗಳ ಮೂಲಕ ವೈಭವೋಕ್ತವಾಗಿ ಪಿತೃ – ವಂದನಾ ಕಾರ್ಯಕ್ರಮ ಜರಾಗಲಾಯಿತು.

ಪೂಜಾ ವಿಧಿಗಳೊಂದಿಗೆ ಆರಂಭವಾದ ಕಾರ್ಯಕ್ರಮ ವಿವಿದ ಮನೋರಂಜನ ಕ್ರೀಡೆಗಳ ಮೂಲಕ ಹಿರಿಯ ಕಿರಿಯ ವ್ಯತ್ಯಾಸವಿಲ್ಲದೆ ತಂದೆಯರು ಕಾರ್ಯಕ್ರಮದಲ್ಲಿ ಬಾಗವಹಿಸಿದರು. ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಾಮಾನ್ಯವಾಗಿ ಮನೆಯಲ್ಲಿ ತಾಯಂದಿರಿಗೆ ವಿಶೇಷ ಆದ್ಯತೆ ಗೌರವ ಕೊಡುವ ಪರಿಪಾಠ ನಮ್ಮ ಸಂಸ್ಕೃತಿಯಲ್ಲಿದೆ ಅದೇ ರೀತಿಯಲ್ಲಿ ಸಮಾಜ ಮತ್ತು ಕುಟುಂಬ ನಿರ್ವಹಣೆಯಲ್ಲಿ ತಂದೆಯರ ಪಾತ್ರವನ್ನು ಸಮಾಜ ಗೌರವ ಪೂರ್ವಕವಾಗಿ ನೋಡಬೇಕೆಂದು ಧರ್ಮ ಕೇಂದ್ರದ ಫಾ. ಷಾಜಿ ಮಾತ್ಯು ಒತ್ತಿ ಹೇಳಿದರು.

Exit mobile version