Site icon Suddi Belthangady

ಎಸ್.ಡಿ.ಎಮ್. ಇಂಜಿನಿಯರಿಂಗ್‌ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಉಜಿರೆ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್‌ ಕಾಲೇಜಿನ ಯೂತ್‌ ರೆಡ್‌ಕ್ರಾಸ್‌ ಘಟಕವು, ಎಸ್.ಡಿ.ಎಮ್ ಆಸ್ಪತ್ರೆ ಉಜಿರೆ ಮತ್ತು ರೆಡ್‌ಕ್ರಾಸ್‌‌ ರಕ್ತನಿಧಿ ಮಂಗಳೂರು, ಇವರ ಸಹಭಾಗಿತ್ವದೊಂದಿಗೆ ಮಾ. 11ರಂದು ರಕ್ತದಾನ ಶಿಬಿರವನ್ನು ಆಯೋಜಿಸಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎಸ್.ಡಿ.ಎಮ್ ಆಸ್ಪತ್ರೆಯ ನಿರ್ದೇಶಕ ಜನಾರ್ದನ್‌ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಇತರರಿಗೆ ಜೀವದಾನ ಮಾಡಬಹುದು, ಇದು ಮಹತ್ವದ ಕಾರ್ಯ ಎಂದು ನುಡಿದರು.

ಎಸ್.ಡಿ.ಎಮ್ ಆಸ್ಪತ್ರೆ ಉಜಿರೆಯ‌ ಪ್ರಯೋಗಾಲಯದ ಮುಖ್ಯಸ್ಥ. ಶಿತಿಕಂಠ ಭಟ್, ಯೂತ್‌ ರೆಡ್‌ಕ್ರಾಸ್‌ ಘಟಕದ ಪ್ರಾದ್ಯಾಪಕ, ಸಂಯೋಜಕ ಡಾ. ಸತ್ಯನಾರಾಯಣ ಭಟ್, ಘಟಕದ ವಿದ್ಯಾರ್ಥಿ ಮುಖಂಡ ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಶಿ ಶೆಟ್ಟಿ ರೆಡ್‌ಕ್ರಾಸ್‌ ಧ್ಯೇಯೋದ್ದೇಶ ವಿವರಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ್ ಕುಮಾರ್, ಶುಭಹಾರೈಸಿದರು. ವಿದ್ಯಾರ್ಥಿನಿ ಚಂದನ ಕಾರ್ಯಕ್ರಮ ನಿರ್ವಹಿಸಿದರು. ಪ್ರಾದ್ಯಾಪಕ ಡಾ. ವಿನಯ್‌ ಶ್ಯಾಮ್‌ ಮತ್ತು ಜಗದೀಶ್‌ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು. ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಸುಮಾರು 165 ಯುನಿಟ್‌ ರಕ್ತದಾನ ಮಾಡಿದರು.-ಡಾ. ಅಶೋಕ್ ಕುಮಾರ್ ಪ್ರಾಂಶುಪಾಲರು

Exit mobile version