Site icon Suddi Belthangady

ಏ. 12: ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬೆಳ್ತಂಗಡಿ: ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಬರುವ ಏ. 11 ಮತ್ತು 12ರಂದು ನಡೆಯಲಿರುವ ಬೃಹತ್ ವಾರ್ಷಿಕ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿರುವುದು.

ಈ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆಯು ಮಾ. 25ರಂದು ಗೌಸಿಯಾ ಮಸೀದಿಯ ಅದ್ಯಕ್ಷರ ಕಛೇರಿಯಲ್ಲಿ ನಡೆಯಿತು. ಅಧ್ಯಕ್ಷ ಮಹಮ್ಮದ್ ರಫೀ ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು.

ಮಾ. 29ರಂದು ಗೌಸಿಯಾ ಮಸೀದಿ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ತಾಲೂಕಿನ ಎಲ್ಲಾ ಸುನ್ನೀ ಸಂಘಟಣೆಗಳ ಪಿ. ಎಸ್. ಟಿ (PST) ಮತ್ತು ಸುನ್ನೀ ಮುಖಂಡರ ಸಭೆ ಕರೆಯುವುದೆಂದು ತೀರ್ಮಾನಿಸಲಾಯಿತು.

ಸತ್ತಾರ್ ಸಖಾಫಿ, ಸಂಶೀರ್ ಸಖಾಫಿ, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು,ಜುಬೈರ್ ಸಅದಿ, ರಶೀದ್ ಮದನಿ, ಅಬ್ದುಲ್ ಕರೀಮ್ ಗೇರುಕಟ್ಟೆ, ಅಬೂಬಕ್ಕರ್ ಸಿದ್ದೀಕ್ ಕಾಜೂರು, ಅಶ್ರಫ್ ಮುಂಡಾಜೆ, ಕೋಶಾದಿಕಾರಿ ಬಶೀರ್ ಅಹಮದ್ ಹಾಜರಿದ್ದರು. ಈ ಕಾರ್ಯಕ್ರಮದ ಯಶಸ್ವಿಗಾಗಿ ರೂಪುರೇಶೆ ತಯಾರಿಸಲಾಯಿತು.

Exit mobile version