Site icon Suddi Belthangady

ನಾವೂರು: ಮಹಿಳಾ ಗ್ರಾಮ ಸಭೆ

ನಾವೂರು: ಮಾ.24ರಂದು ಪೂರ್ವಾಹ್ನ 11.00 ಗಂಟೆಗೆ ಸರಿಯಾಗಿ ನಾವೂರು ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ಮಹಿಳಾ ಗ್ರಾಮ ಸಭೆಯನ್ನು ನಡೆಸಲಾಯಿತು. ಸದ್ರಿ ಸಭೆಯಲ್ಲಿ ಗುಲಾಬಿ ಎ. ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯವರು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಮತ್ತು ಬಾಲ್ಯವಿವಾಹದ ಬಗ್ಗೆ ಸವಿವಿವರವಾಗಿ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾ. ಪಂ. ನ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷೆ ಮಮತ, ಸದಸ್ಯರಾದ ವೇದಾವತಿ, ಗಣೇಶ್‌ ಗೌಡ, ಎನ್‌. ಕೆ. ಹಸೈನಾರ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ನಿರ್ಮಲ್‌ ಕುಮಾರ್‌, ಸಮುದಾಯ ಆರೋಗ್ಯ ಅಧಿಕಾರಿ ಕಾವ್ಯ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಎಂ.ಬಿ.ಕೆ, ಎಲ್‌. ಸಿ. ಆರ್‌. ಪಿ., ಕೃಷಿ ಸಖಿ, ಪಶು ಸಖಿ, ಸಂಜೀವಿನಿ ಸದಸ್ಯರು, ಗ್ರಾಮಸ್ಧರು, ಗ್ರಾಮ ಪಂಚಾಯತ್‌ ಸಿಬ್ಬಂದಿ ವರ್ಗ ಉಪಸ್ಧಿತರಿದ್ದರು. ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ನಿರ್ಮಲ್‌ ಕುಮಾರ್ ಸ್ವಾಗತಿಸಿ, ಧನ್ಯವಾದವಿತ್ತರು.

Exit mobile version