Site icon Suddi Belthangady

ಮನೆ ದುರಸ್ತಿಗೆ ರಕ್ಷಿತ್ ಶಿವರಾಂ ನೆರವು

ಬೆಳ್ತಂಗಡಿ: ಅಳದಂಗಡಿ ಸಮೀಪದ ಪಿಲ್ಯದ ವಿಮಲ ಮಡಿವಾಳ ಎಂಬವರ ಮನೆ ತೀವ್ರ ಸ್ವರೂಪದ ಗಾಳಿ ಮಳೆಗೆ ಸಂಪೂರ್ಣ ಕುಸಿದಿತ್ತು. ಈ ಬಗ್ಗೆ ಕಾರ್ಯಪ್ರವೃತರಾದ ಸ್ಥಳೀಯ ಕಾಂಗ್ರೆಸ್ ಪಕ್ಷದ ‌ನಾಯಕ ಸಂತೋಷ್ ಪೂಜಾರಿ ನಿನ್ನಿಕಲ್ಲು ರವರು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರ ಗಮನ ಸೆಳೆದರು.

ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ರಕ್ಷಿತ್ ಶಿವರಾಂ ರವರು ಸಹಾಯಹಸ್ತ ನೀಡಿ, ಸಂತೋಷ್ ನಿನ್ನಿಕಲ್ಲು ರವರ ನೇತೃತ್ವದಲ್ಲಿ ಮನೆ ದುರಸ್ತಿ ಮಾಡಲು ಸೂಚಿಸಿದರು. ಕಾಂಗ್ರೆಸ್ ಪಕ್ಷದ ನಾಯಕ, ಉದ್ಯಮಿ ಪ್ರವೀಣ್ ಪೆರ್ನಾಂಡೀಸ್ ಹಳ್ಳಿಮನೆ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೋ ಉಪಸ್ಥಿತರಿದ್ದರು.

Exit mobile version