Site icon Suddi Belthangady

ಬೆಳ್ತಂಗಡಿ ಮನ್ ಶರ್ ಪ್ಯಾರಾಮೆಡಿಕಲ್ ಕಾಲೇಜಿನ DMIT ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ, ತೃತೀಯ: ಒಟ್ಟು 6 ರ್‍ಯಾಂಕ್

ಬೆಳ್ತಂಗಡಿ: ಸಯ್ಯದ್ ಉಮರ್ ಅಸ್ಸಖಾಫ್ ಮನ್ ಶರ್ ತಂಗಳ್ ರವರ ನೇತೃತ್ವದ ಮನ್ ಶರ್ಪ್ಯಾ ರಾಮೆಡಿಕಲ್‌ ಕಾಲೇಜು ಕರ್ನಾಟಕ ರಾಜ್ಯ- ಪ್ಯಾರಾಮೆಡಿಕಲ್ ಬೋರ್ಡ್, ಇತ್ತೀಚೆಗೆ ಪ್ರಕಟಗೊಳಿಸಿರುವ ಬ್ಯಾಂಕನ್ನು DMIT (x-ray) ವಿಭಾಗದಲ್ಲಿ ರಾಜ್ಯಕ್ಕೆ ಮರಿಯಮ್ ಬೀವಿಯವರು ಪ್ರಥಮ ರ್‍ಯಾಂಕ್ ನ್ನು, ಬಿ.ವೈ. ಸಫೀನಾ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ನ್ನು ಫಾತಿಮಾ ಸಫಾ ರಾಜ್ಯಕ್ಕೆ ತೃತೀಯ ರ್‍ಯಾಂಕ್ ನ್ನು ಕ್ರಮವಾಗಿ ಪಡೆದು ಅಪ್ರತಿಮ ಸಾಧನೆಯನ್ನು ಮಾಡಿ ಗ್ರಾಮೀಣ ಪ್ರದೇಶದ ಕಾಲೇಜಿನ ಹೆಸರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅಲ್ಲದೆ DMIT ವಿಭಾಗಕ್ಕೆ ಅಫೀಫ 5ನೇ ರ್‍ಯಾಂಕ್, ನಾಫಿಯ ಬಾನು 9ನೇ ರ್‍ಯಾಂಕ್ ಹಾಗೂ ರಿಹಾನಾಜ್ 10ನೇ ರ್‍ಯಾಂಕ್ ನ್ನು ಪಡೆದಿದ್ದಾರೆ.

ರ್‍ಯಾಂಕ್ ಗಳಿಸಿರುವ ವಿದ್ಯಾರ್ಥಿಗಳನ್ನು, ಇದರ ಹಿಂದೆ ಬೆನ್ನೆಲುಬಾಗಿ ನಿಂತ ಶಿಕ್ಷಕ ವೃಂದ, ಪೋಷಕರಿಗೆ ಅಭಿನಂದನೆಯನ್ನು ಪ್ರಾಂಶುಪಾಲ ಹೈದ‌ರ್ ಮರ್ದಾಳ ಸಲ್ಲಿಸಿದರು. ಅವರು ಮಾ. 24ರಂದು ಮನ್ ಶರ್ ಪ್ಯಾರಾಮೇಡಿಕಲ್ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯಲ್ಲಿ ಕಳೆದ 15 ವರ್ಷಗಳಿಂದ ವಿವಿಧ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಗ್ರಾಮೀಣ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುತ್ತದೆ. ಮನ್ ಶರ್ ಸಂಸ್ಥೆ ಎಲ್.ಕೆ.ಜಿ (LKG), ಯು.ಕೆ.ಜಿ (UKG)ಯಿಂದ ಎಸ್.ಎಸ್.ಎಲ್.ಸಿ (SSLC)ಯ ತನಕ ಹಾಗೂ ಪಿ. ಯು.(PU)ಕಾಲೇಜು ವಾಣಿಜ್ಯ ಮತ್ತು ವಿಜ್ಞಾನ ವಿಭಾಗವನ್ನು ಮುನ್ನಡೆಸುತ್ತಿದೆ.

ಸತತವಾಗಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು. ಸಿ ಯಲ್ಲಿ ಹಲವು ಬಾರಿ 100% ಫಲಿತಾಂಶವನ್ನು ಪಡೆದಿರುತ್ತದೆ. 2019ರಿಂದ ಬೆಳ್ತಂಗಡಿ ತಾಲೂಕಿನ ಏಕೈಕ ಪ್ಯಾರಾಮೆಡಿಕಲ್ ಕಾಲೇಜನ್ನು ಸ್ಥಾಪಿಸಿ ಇದೀಗ ರಾಜ್ಯಮಟ್ಟದಲ್ಲೇ ಪ್ರಥಮ, ದ್ವಿತೀಯ, ತೃತೀಯ ಹಾಗೂ ಒಟ್ಟು 6 ರ್‍ಯಾಂಕ್ ಗಳನ್ನು ಪಡೆದು ಬೆಳ್ತಂಗಡಿ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಹೈದಾರ್ ಮರ್ದಾಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪನ್ಯಾಸಕರಾದ ರಶೀದ್, ಗೌತಮಿ ಶರಣ್, ವಿಶ್ವನಾಥ್, ದಿಶಾಂತ್ ಉಪಸ್ಥಿತರಿದ್ದರು.

Exit mobile version