Site icon Suddi Belthangady

ನೇಲ್ಯಡ್ಕ ಸ. ಪ್ರೌ. ಶಾಲೆಗೆ ಬ್ಯಾಂಕ್ ಆಫ್ ಬರೋಡದಿಂದ ಕಪಾಟು ಕೊಡುಗೆ

ಬೆಳ್ತಂಗಡಿ: ತಾಲೂಕಿನ ಗ್ರಾಮೀಣ ಪ್ರದೇಶವಾದ ನೇಲ್ಯಡ್ಕದಲ್ಲಿರುವ ಸರ್ಕಾರಿ ಪ್ರೌಢ ಶಾಲೆಗೆ ಬ್ಯಾಂಕ್ ಆಫ್ ಬರೋಡ ವತಿಯಿಂದ ಶಾಲಾ ಕಚೇರಿಯ ಬಳಕೆಗೆ ಒಂದು ಕಪಾಟನ್ನು ಕೊಡುಗೆಯಾಗಿ ನೀಡಲಾಯಿತು. ಬ್ಯಾಂಕ್ ಆಫ್ ಬರೋಡಾದ ಉದನೆ ಶಾಖೆಯ ಮ್ಯಾನೇಜರ್ ನಿತಿನ್ ಕೃಷ್ಣ ಕಪಾಟನ್ನು ಹಾಗೂ ನೇರಳೆ ಹಣ್ಣಿನ ಗಿಡವನ್ನು ಪ್ರೌಢ ಶಾಲೆಗೆ ಹಸ್ತಾಂತರಿಸಿ ಶಾಲೆಗೆ ಶುಭ ಹಾರೈಸಿದರು.

ಸಂಸ್ಥೆಯ ಕೋರಿಕೆಯನ್ನು ಪರಿಗಣಿಸಿ ಪ್ರೌಢ ಶಾಲೆಗೆ ಕೊಡುಗೆಯನ್ನು ನೀಡಿದ ಬ್ಯಾಂಕಿಗೆ ಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಕೃಷ್ಣ ಧನ್ಯವಾದಗಳನ್ನು ಸಲ್ಲಿಸಿದರು.

ಬ್ಯಾಂಕಿನ ಹಿರಿಯ ಅಧಿಕಾರಿ ಪೌಲೌಸ್ ಪಿ.ಸಿ., ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅರವಿಂದ ಗೋಖಲೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಉದಯಕುಮಾರ್ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ್ ವಂದಿಸಿದರು.

Exit mobile version