Site icon Suddi Belthangady

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಸದ್ಗುರು ಬ್ರಹ್ಮಾನಂದ ಶ್ರೀಗಳಿಗೆ ಗೌರವಾಭಿನಂದನೆ

ಧರ್ಮಸ್ಥಳ: ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. ಸ್ವಾಮೀಜಿಆಶೀರ್ವಚನ ನೀಡಿದರು. ಕ್ಷೇತ್ರದ ವತಿಯಿಂದ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಇವರನ್ನು ಸ್ವಾಮೀಜಿ ಅಭಿನಂದಿಸಿದರು.

ಘಟಕದ ಗೌರವ ಸಲಹೆಗಾರ ರಮಾನಂದ ಸಾಲಿಯಾನ್ ಮುಂಡೂರು, ಮಾಜಿ ಅಧ್ಯಕ್ಷ ರಾಕೇಶ್ ಮುಡುಕೋಡಿ, ಪ್ರಶಾಂತ್ ಮಚ್ಚಿನ, ಹರೀಶ್ ಸುವರ್ಣ, ಎಂ.ಕೆ. ಪ್ರಸಾದ್, ಸುಜಾತ ಅಣ್ಣಿ ಪೂಜಾರಿ, ಉಪಾಧ್ಯಕ್ಷ ಸುನಿಲ್ ಕನ್ಯಾಡಿ, ಕೋಶಾಧಿಕಾರಿ ನಾಗೇಶ್ ಆದೆಲು, ಮಹಿಳಾ ಸಂಚಾಲನ ಸಮಿತಿ ಪ್ರ.ಸಂಚಾಲಕಿ ಲೀಲಾವತಿ ಪಣಕಜೆ, ಅಶೋಕ್ ಕಲ್ಮಂಜ, ಸುದೀಪ್ ಸಾಲಿಯಾನ್ ಸವಣಾಲು, ರಾಘವೇಂದ್ರ ಮೇಲಂತಬೆಟ್ಟು, ವಸಂತ ಪೂಜಾರಿ ಮುಂಡೂರು, ಸಚಿನ್ ನೂಜೋಡಿ, ರೂಪೇಶ್ ಧರ್ಮಸ್ಥಳ, ಶೈಲೇಶ್ ಓಡಿಲ್ನಾಳ, ಪೂರ್ಣಿಮಾ ಮುಂಡಾಜೆ, ಶಾಂಭವಿ ಮುಂಡೂರು, ಜಯಶ್ರೀ ಕಿಲ್ಲೂರು, ಘಟಕದ ಸದಸ್ಯರು ಭಾಗವಹಿಸಿದ್ದರು.

Exit mobile version