Site icon Suddi Belthangady

ಉಜಿರೆಯ ಎಸ್. ಡಿ. ಎಂ ಡಿ.ಎಡ್ ಕಾಲೇಜಿನಲ್ಲಿ ಕ್ವಿಜ್ ಸ್ಪರ್ಧೆ

ಉಜಿರೆ: ಎಸ್. ಡಿ. ಎಂ ಡಿ. ಎಡ್ ಕಾಲೇಜಿನಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಇದರ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಮಾ.15ರಂದು ಕಾಲೇಜು ಮಕ್ಕಳಿಗಾಗಿ ಕ್ವಿಜ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಸ್. ಡಿ. ಎಮ್ ಡಿ. ಎಡ್ ಕಾಲೇಜಿನ ಪ್ರಾಂಶುಪಾಲರಾದಂತಹ ಸಂತೋಷ್ ಆಲ್ಬರ್ಟ್ ಸಲ್ಧಾನ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬೆಳ್ತಂಗಡಿ ಘಟಕದ ಅಧ್ಯಕ್ಷೆ ವಿದ್ಯಾಶ್ರೀ ಅಡೂರ್ ಅವರು ವಹಿಸಿಕೊಂಡಿದ್ದರು. ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಸಂಸ್ಥಾಪಕ ವಿಜಯಕುಮಾರ್ ಜೈನ್ ಅವರು ಮತ್ತು ರಾಜ್ಯ ಸದಸ್ಯೆ ಆಶಾ ಅಡೂರು, ಕಾಲೇಜನ ಪ್ರಾಧ್ಯಾಪಕ ಮಂಜು ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಮಾರು 90 ವಿದ್ಯಾರ್ಥಿಗಳು ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿದರು. ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಮೋಜಿನ ಆಟಗಳನ್ನು ಕೂಡ ಆಯೋಜಿಸಲಾಗಿತ್ತು.

ಕರ್ನಾಟಕ ರಾಜ್ಯದಾದ್ಯಂತ ವಿವಿಧ ಭಾಗಗಳಿಂದ ಬಿ.ಎಡ್ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಒಂದು ದಿನದ ಚಟುವಟಿಕೆಯಿಂದಾಗಿ ಅತ್ಯಂತ ಸಂತಸ ಪಟ್ಟರು. ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲರಾದ ಸಂತೋಷ್ ಆಲ್ರ್ಬರ್ಟ್ ಅವರು ಮಾತನಾಡಿ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಈ ಸಹಭಾಗಿತ್ವಕ್ಕಾಗಿ ಸಂತೋಷ ವ್ಯಕ್ತಪಡಿಸಿದರು. ಸಂತೋಷ್ ಕೋಟ್ಯಾನ್ ಮುಖ್ಯ ಅತಿಥಿಯಾಗಿದ್ದರು. ವಿದ್ಯಾಶ್ರೀ ಅಡೂರು, ಅಶಾ ಅಡೂರು ಮತ್ತು ವಿಜಯ ಕುಮಾರ್ ಜೈನ್ ಉಪಸ್ಥಿತಿತರಿದ್ದರು.

ಕಾರ್ಯಕ್ರಮದಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬೆಳ್ತಂಗಡಿ ಘಟಕದ ಸದಸ್ಯರಾದ ಶ್ವೇತ ಗೋಡ್ಬೋಲೆ, ನಿರೀಕ್ಷಾ ನಂದಿ ಬೆಟ್ಟ, ಧನ್ಯಶ್ರೀ ಬೆಳಾಲು ಭಾಗವಹಿಸಿದ್ದರು. ಕಾಲೇಜಿನ ಶಿಕ್ಷಕ ವೃಂದದವರಾದ ತಿರುಮಲೇಶ್ ರಾವ್, ವಿದ್ಯಾಶ್ರೀ ಪಿ., ಅನುಷಾ ಡಿ. ಜೆ., ಚೈತ್ರ, ಪ್ರಿಯದರ್ಶಿನಿ ಸಹಕಾರವನ್ನು ನೀಡಿದರು.

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಸದಸ್ಯ ರೇಣುಕಾ ಸುಧೀರ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀದೇವಿ ಸಚಿನ್ ಪ್ರಾರ್ಥನೆಯನ್ನು ಹಾಡಿದರು. ಕಾರ್ಯದರ್ಶಿಗಳಾದಂತಹ ಅಶ್ವಿಜ ಶ್ರೀಧರ್ ವಂದನಾರ್ಪಣೆಯನ್ನು ಸಲ್ಲಿಸಿದರು.

Exit mobile version