Site icon Suddi Belthangady

ಗೇರುಕಟ್ಟೆ: ಮನ್ಶರ್ ಕ್ಯಾಂಪಸ್ ನಲ್ಲಿ ನಡೆದ ಸೌಹಾರ್ಧ ಇಫ್ತಾರ್ ಕೂಟದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್

ಬೆಳ್ತಂಗಡಿ: ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾ.21ರಂದು ಗೇರುಕಟ್ಟೆಯ ಸಯ್ಯಿದ್ ಮನ್ಶರ್ ತಂಙಳ್ ನೇತೃತ್ವದ ಮನ್ಸರ್ ಕ್ಯಾಂಪಸ್ ನಲ್ಲಿ ಸೌಹಾರ್ಧ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.

ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ನೇತ್ರತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರವೀಣ್ ಫೆರ್ನಾಂಡಿಸ್ ಹಳ್ಳಿ ಮನೆ, ಉಡುಪಿ ಜಿಲ್ಲಾ ಗಣಿ ಅಧಿಕಾರಿ ಡಾ. ಹಾಜಿರಾ ಸಜಿನಿ, ಪ್ಯಾರಾ ಮೆಡಿಕಲ್ ಉಪ ಪ್ರಾಂಶುಪಾಲೆ ಗೌತಮಿ ಶರಣ್, ಪಿ.ಯು. ಕಾಲೇಜಿನ ಉಪಪ್ರಾಂಶುಪಾಲ ತೌಫಿಕ್, ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಉಷಾ, ಪ್ಯಾರಾ ಮೆಡಿಕಲ್ ಉಪನ್ಯಾಸಕರಾದ ದಿಶಾಂತ್, ಪ್ರತಾಪ್, ಶಿಕ್ಷಕಿ ರಮ್ಯಾ, ಕಡಬ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಪಿ.ಯೂ ಸುಫ್ ಹಾಜಿ, ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್, ಶಾಹಿರ್ ಉಪ್ಪಳ, ಅರೆಬಿಕ್ ವಿಭಾಗದ ಅಬ್ದುಲ್ಲ ಸಖಾಫಿ, ಪತ್ರಕರ್ತರಾದ ಕೆ.ಎನ್.ಗೌಡ, ಶರತ್ ಲೋಬೋ, ಬಿ.ಐ. ಮಹಮ್ಮದ್ ಹನೀಫ್, ಹಸೈನಾರ್ ಹಾಜಿ, ಸುಜೇತ್, ಎಕೌಂಟೆಂಟ್ ಶಬೀರ್, ಸಿದ್ದೀಕ್ ಜಿ. ಹೆಚ್., ನವೀನ್, ಹಮೀದ್ ಜಿ. ಡಿ., ಅರ್ಶದ್, ರಶೀದ್, ಕಾಲೇಜಿನ ಉಪನ್ಯಾಸಕರು ಮತ್ತು ಅಧ್ಯಾಪಕ ವೃಂದ, ಸಿಬ್ಬಂದಿಗಳು ಭಾಗವಹಿಸಿದರು.

Exit mobile version